ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಶ್ರಯ ಬೇಡಿ ಬಂದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಮಹಿಳೆ ಸೇರಿ ಮೂವರಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆನಂದ ಪಿ.ಹೊಗಾಡೆ ತೀರ್ಪು ನೀಡಿದ್ದಾರೆ.
ಕೆ.ಆರ್.ಪೇಟೆ ತಾಲೂಕು ಚಿಕ್ಕನಹಳ್ಳಿಪುರ ಗ್ರಾಮದ ರೇಖಾ, ಶ್ರೀರಂಗಪಟ್ಟಣದ ರಾಘವೇಂದ್ರ, ಪುರ ಗ್ರಾಮದ ಉಮೇಶ್ ಶಿಕ್ಷೆಗೆ ಗುರಿಯಾದವರು. ಇತರ ಆರೋಪಿಗಳಾದ ಲೀಲಾವತಿ ಮತ್ತು ಲಲಿತಾ ಅವರನ್ನು ಸನ್ನಡತೆ ಕಾಯ್ದುಕೊಂಡು ಹೋಗುವ ಷರತ್ತಿನ ಮೇರೆಗೆ ಪಿಒ ಕಾಯ್ದೆಯಡಿ ಬಿಡುಗಡೆಗೊಳಿಸಲಾಗಿದೆ. ಉಳಿದವರ ಪೈಕಿ ಗಿರೀಶ್ ತಲೆಮರೆಸಿಕೊಂಡಿರುವುದರಿಂದ ಆತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು ಶಿವರಾಮು, ಅಭಿಷೇಕ್ ಮತ್ತು ಸಿದ್ದರಾಮ ಎಂಬವರು ವಿಚಾರಣೆ ಸಮಯದಲ್ಲೇ ಮೃತಪಟ್ಟಿದ್ದಾರೆ.