ಹೊಸದಿಗಂತ ವರದಿ ಅಂಕೋಲಾ:
ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಓರ್ವ ಪ್ರವಾಸಿಗ ಮೃತ ಪಟ್ಟು ಮೂವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಹೊಸಕಂಬಿಯಲ್ಲಿ ನಡೆದಿದೆ.
ಹುಬ್ಬಳ್ಳಿ ನಿವಾಸಿ ದರ್ಶನ ಕಳಸೂರು ಎನ್ನುವವರು ಹೆಜ್ಜೇನು ದಾಳಿಯಿಂದಾಗಿ ತೀವ್ರ ಅಸ್ವಸ್ಥಗೊಂಡು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಹುಬ್ಬಳ್ಳಿಯಿಂದ ನಾಲ್ಕು ಜನರು ಕಾರಿನಲ್ಲಿ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದು ಹೊಸಕಂಬಿ ಹಿಲ್ಲೂರು ಮಾರ್ಗವಾಗಿ ಗೋಕರ್ಣ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಸಕಂಬಿ ಸೇತುವೆ ಬಳಿ ಇಳಿದು ಪೋಟೋ ತೆಗೆಯುತ್ತಿದ್ಧ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ರೊಚ್ಚಿಗೆದ್ದು ದಾಳಿ ನಡೆಸಿದ್ದು ಪ್ರವಾಸಿಗರು ಓಡಿ ದಾಳಿಯಿಂದ ತಪ್ಫಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಸಾಕಷ್ಟು ಪ್ರಮಾಣದಲ್ಲಿ ಜೇನು ನೊಣಗಳು ಪ್ರವಾಸಿಗರ ಮೇಲೆ ದಾಳಿ ನಡೆಸಿವೆ.
ಆಸ್ಪತ್ರೆಯನ್ನು ಹುಡುಕಿ ಗೋಕರ್ಣ ತಲಪುವಷ್ಟರಲ್ಲಿ ರಾತ್ರಿಯಾಗಿದ್ದು ಅಷ್ಟರಲ್ಲಿ ದರ್ಶನ್ ಮೃತ ಪಟ್ಟಿದ್ದು ಅಸ್ವಸ್ಥಗೊಂಡ ಮೂವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ