ಬೆಂಗಳೂರಿನಲ್ಲಿ ಮೂವರಿಗೆ ಚಾಕು ಇರಿತ: ಓರ್ವ ಸಾವು, ಮತ್ತಿಬ್ಬರು ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನಲ್ಲಿ ಮೂವರಿಗೆ ಚಾಕು ಇರಿತವನ್ನು ಓರ್ವ ವ್ಯಕ್ತಿ ಮಾಡಿದ್ದು, ಒಬ್ಬರ ಚಾಕು ಇರಿತದಿಂದ ಸಾವನ್ನಪ್ಪಿ, ಮತ್ತಿಬ್ಬರು ಗಂಭೀರಗೊಂಡಿರೋದಾಗಿ ತಿಳಿದು ಬಂದಿದೆ.

ಇಂದು ಸಂಜೆ ಮಾದಕ ವ್ಯಸನಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಹಾಗೂ ಸುಮ್ಮನೆ ಕುಳಿತುಕೊಂಡಿದ್ದವರಿಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಗಣಪತಿ ದೇವಸ್ಥಾನ ಬಳಿ ನಡೆದಿದೆ.

ಸುಮ್ಮನೆ ಕುಳಿತವರಿಗೆ ಚಾಕು ಇರಿತದ ಘಟನೆಯಿಂದ ಪ್ರಯಾಣಿಕರು ಹಾಗೂ ಇತರೆ ಸಾರ್ವಜನಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಾಂಜಾ ಸೇವನೆಯ ಮತ್ತಿನಲ್ಲಿ ಇದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ (ಸೈಕೋ) ನಡೆದುಕೊಂಡಿದ್ದಾನೆ.

ಆದ್ರೇ ತೀವ್ರ ರಕ್ತ ಸ್ತ್ರಾವಗೊಂಡಿದ್ದಂತ ಮಲ್ಲಿನಾಥ ಬೀರದಾರ್ ಎಂಬುವರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಇನ್ನುಳಿದ ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು, ಅವರಿಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!