ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂವರು ಪಿಯುಸಿ ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ವಿಶಾಖಪಟ್ಟಣದಲ್ಲಿ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ. ಗಾಜುವಾಕ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ಇದೇ ತಿಂಗಳ 24ರಂದು ನಡೆದಿದೆ. ಕಾಲೇಜಿಗೆ ಹೋದ ವಿದ್ಯಾರ್ಥಿಗಳು ಮರಳಿ ಮನೆ ತಲುಪಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಗಾಜುವಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದಲ್ಲದೇ ಗಜುವಾಕ ಪೋಲೀಸರ ಮಾಹಿತಿ ಮೇರೆಗೆ ಕೆ.ಕೋಟಪಾಡು ಪೋಲೀಸರು ಕೂಡ ಶೋಧ ಕಾರ್ಯ ಕೈಗೊಂಡಿದ್ದಾರೆ. ಮೂರು ದಿನಗಳಿಂದ ಹುಡುಕಿದರೂ ಇದುವರೆಗೂ ವಿದ್ಯಾರ್ಥಿಗಳು ಪತ್ತೆ ಆಗಿಲ್ಲ. ನಾಪತ್ತೆಯಾದ ವಿದ್ಯಾರ್ಥಿಗಳನ್ನು ಉಮೇಶ್ ಪವನ್ (16), ದಿಲೀಪ್ (16) ಮತ್ತು ದಂತೇಶ್ವರಿ (16) ಎಂದು ಗುರುತಿಸಲಾಗಿದೆ. ಇತ್ತ ಕಾಣೆಯಾದ ಮಕ್ಕಳಿಗಾಗಿ ಹೆತ್ತವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿಗಳ ನಾಪತ್ತೆ ಹಿಂದಿನ ಕಾರಣಗಳೇನು? ಉದ್ದೇಶಪೂರ್ವಕವಾಗಿ ಮೂವರೂ ಒಟ್ಟಾಗಿದ್ದಾರಾ? ಯಾರಾದರೂ ಅಪಹರಿಸಿದ್ದಾರೆಯೇ? ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.