ಒಡಿಶಾದಲ್ಲಿ ಮೂವರು ಮಹಿಳಾ ಮಾವೋವಾದಿಗಳ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಒಡಿಶಾ ಪೊಲೀಸರು ಬಹುಮಾನ ಹೊತ್ತ ಮೂವರು ಮಹಿಳಾ ಹೈ-ಪ್ರೊಫೈಲ್ ಮಾವೋವಾದಿಗಳನ್ನು ಬಂಧಿಸಿದ್ದಾರೆ. ಸ್ವಪ್ನಾ ಅಲಿಯಾಸ್ ಚಂದ್ರಮ ಖಿಲೋ, ಬಬಿತಾ ಅಲಿಯಾಸ್ ಕಮಲಾ ಖಿಲೋ ಮತ್ತು ಸುನೀತಾ ಖಿಲೋ ಬಂಧಿತ ಮಹಿಳಾ ಮಾವೋವಾದಿಗಳು.

ಬಂಧಿತರ ತಲೆಗೆ ಒಟ್ಟು 8 ಲಕ್ಷ ರೂ. ಘೋಷಣೆ ಮಾಡಲಾಗಿತ್ತು. ಶನಿವಾರ ಮಲ್ಕಾನ್‌ಗಿರಿ ಜಿಲ್ಲೆ ಚಿತ್ರಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಗುಮ್ಮಾ ಎಂಬ ಪ್ರದೇಶದಲ್ಲಿ ಈ ಮೂವರು ಮಹಿಳಾ ಮಾವೋವಾದಿಗಳನ್ನು ಬಂಧಿಸಿರುವ ಒಡಿಶಾ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಮೂವರು ಜಿಲ್ಲೆಯ ಜೋಡಂಬೋ ಪೊಲೀಸ್ ಠಾಣೆ ವ್ಯಾಪ್ತಿಯ ಢಕಡಪದರ್ ಗ್ರಾಮದವರಾಗಿದ್ದು, ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಆಂಧ್ರ-ಒಡಿಶಾ ಗಡಿ ವಿಶೇಷ ವಲಯ ಸಮಿತಿಯಲ್ಲಿ ಕಾಣಿಸಿಕೊಂಡಿರುವುದಾಗಿ ನೈಋತ್ಯ ವಲಯದ ಡಿಐಜಿ ನಿತಿ ಶೇಖರ್ ಮತ್ತು ಮಲ್ಕಾನ್‌ಗಿರಿ ಪೊಲೀಸ್ ವರಿಷ್ಠಾಧಿಕಾರಿ ಬಿಬೇಕಾನಂದ ಶರ್ಮಾ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!