July 15, 2026
Wednesday, July 15, 2026
spot_img

ಮಿಕ್ಸ್‌ಚರ್‌ನಲ್ಲಿದ್ದ ಶೇಂಗಾಬೀಜ ನುಂಗಿ ಮೂರು ವರ್ಷದ ಕಂದಮ್ಮ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳು ಏನು ತಿಂದರೂ ಅದನ್ನು ಪೋಷಕರು ನೋಡ್ತಾ ಇರಬೇಕು. ತಿನ್ನೋ ವಸ್ತು ತಾನೆ ತಿನ್ಲಿ ಎಂದು ಸುಮ್ಮನೆ ಇದ್ದರೆ ಕೆಲವೊಮ್ಮೆ ದುರ್ಘಟನೆಗಳು ಸಂಭವಿಸುತ್ತವೆ. ಕೇರಳದ ಮಲಪ್ಪುರಂನಲ್ಲಿ ಮಿಕ್ಸ್ಚರ್‌ನಲ್ಲಿ ಇರುವ ಶೇಂಗಾ ಬೀಜ ಗಂಟಲಿನಲ್ಲಿ ಸಿಕ್ಕು ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಕುನ್ನುಂಪುರಂನ ಚೆಂಗಣಿ ನಿವಾಸಿಗಳಾದ ಮುನೀರ್ ಮತ್ತು ಫರ್ಸಿನಾ ದಂಪತಿಯ ಮೂರು ವರ್ಷದ ಮಗ ಮುಹಮ್ಮದ್ ರಿಝಾನ್ ಬಲಿಯಾದ ದುರ್ದೈವಿ. ರಿಝಾನ್‌ ಬೆಳಗ್ಗೆ ಮಿಕ್ಸ್‌ಚರ್‌ ಸೇವಿಸುತ್ತಿದ್ದ. ತಿನ್ನುವ ವಸ್ತು ಎಂದು ಪೋಷಕರು ಸುಮ್ಮನಿದ್ದರು. ತಿನ್ನುವ ವೇಳೆ ಶೇಂಗಾ ಬೀಜ ಮಗುವಿನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಮಗುವಿಗೆ ಉಸಿರಾಟದ ತೊಂದರೆಯಾಗಿದ್ದು ತಕ್ಷಣವೇ ಒದ್ದಾಡಿದೆ.

ಮಗು ಉಸಿರುಗಟ್ಟಿ ಒದ್ದಾಡುತ್ತಿರುವುದನ್ನು ಕಂಡು ಗಾಬರಿಯಾದ ಪೋಷಕರು ತಕ್ಷಣವೇ ಆತನನ್ನು ಕುನ್ನುಂಪುರಂನ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ವೈದ್ಯರು ಮಗುವಿನ ಪ್ರಾಣ ಉಳಿಸಲು ಶ್ರಮಿಸಿದರಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಮಿಕ್ಸ್​ಚರ್​ನಲ್ಲಿದ್ದ ಕಡಲೇ ಬೀಜ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟ ಸ್ಥಗಿತಗೊಂಡಿದ್ದೇ ಸಾವಿಗೆ ನೇರ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !