ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಡೆಹ್ರಾಡೂನ್‌ನ ಸಿಂಗ್ಲಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾರೆ.
ಮಗು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ ಎಳೆದೊಯ್ದಿದೆ. ರಾತ್ರಿಯಿಡೀ ಸ್ಥಳೀಯರು ಹಾಗೂ ಕುಟುಂಬದವರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಬೆಳಗಿನ ಜಾವಕ್ಕೆ ಮಗು ಮೃತದೇಹ ಪತ್ತೆಯಾಗಿದೆ.
ಮೈ ತುಂಬಾ ಗಾಯಗಳಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಹೆತ್ತವರ ಕರುಳು ಹಿಂಡಿದಂಥಾಗಿತ್ತು. ಈವರೆಗೂ ಚಿರತೆ ಕುರುಹು ಪತ್ತೆಯಾಗಿಲ್ಲ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.