Wednesday, December 7, 2022

Latest Posts

ಪತ್ನಿಗೆ ಬಿಜೆಪಿಯಿಂದ ಟಿಕೆಟ್: ಪ್ರಧಾನಿ ಮೋದಿ, ಅಮಿತ್‌ ಶಾಗೆ ಧನ್ಯವಾದ ತಿಳಿಸಿದ ರವೀಂದ್ರ ಜಡೇಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಇದಕ್ಕೆ ಜಡೇಜಾ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರವಿಂದ್ರ ಜಡೇಜಾ, ‘’ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಸಿಕ್ಕಿದ್ದಕ್ಕೆ ನನ್ನ ಹೆಂಡತಿಗೆ ಅಭಿನಂದನೆಗಳು. ನೀನು ಹಾಕಿರುವ ಪ್ರಯತ್ನ ಮತ್ತು ಕಠಿಣ ಪರಿಶ್ರಮಕ್ಕೆ ನನಗೆ ಹೆಮ್ಮೆ ಇದೆ. ಸಮಾಜದ ಅಭಿವೃದ್ಧಿಗಾಗಿ ನೀನು ನಿನ್ನ ಕೆಲಸ ಮುಂದುವರಿಸು. ನಿನಗೆ ನನ್ನ ಅಭಿನಂದನೆಗಳು.
‘ನನ್ನ ಪತ್ನಿಯ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಹಾಗೂ ಉದಾತ್ತ ಕೆಲಸ ಮಾಡಲು ಆಕೆಗೆ ಒಂದು ಅವಕಾಶ ನೀಡಿದ್ದಕ್ಕೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಹಾಗೂ ಅಮಿತ್ ಶಾ ಜೀ ಅವರಿಗೆ ಸಹ ನಾನು ಧನ್ಯವಾದ ಹೇಳಲು ಬಯಸುತ್ತೇನೆಎಂದೂ ರವೀಂದ್ರ ಜಡೇಜಾ ಪೋಸ್ಟ್‌ ಮಾಡಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆಗೆ ಬಿಜೆಪಿ ಇಂದು 160 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ ಜಾಮ್ನಗರ ಉತ್ತರ ಕ್ಷೇತ್ರಕ್ಕೆ ರಿವಾಬಾ ಜಡೇಜಾ ಬಿಜೆಪಿಯ ಆಯ್ಕೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!