ದಿಗಂತ ವರದಿ ವಿಜಯಪುರ:
ಮಹಿಳೆಯರಿಗೆ ಉಚಿತ ಪ್ರಯಾಣದ ಪರಿಣಾಮ ಬಸ್ ಗಳು ಕಿಕ್ಕಿರಿದು ತುಂಬುತ್ತಿದ್ದು, ಉಚಿತ ಟಿಕೆಟ್ ನೀಡಲು ಕೂಡ ನಿರ್ವಾಹಕ ಹರಸಾಹಸ ಪಟ್ಟ ವಿಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಸಾರಿಗೆ ಬಸ್ ನಿರ್ವಾಹಕ ಟಿಕೆಟ್ ಕೊಡಲು ತೆರಳದಷ್ಟು ಪ್ರಯಾಣಿಕರು ತುಂಬಿದ್ದರಿಂದ, ಸೀಟಿನ ಮೇಲೆ ಕುಕ್ಕರಗಾಲಲ್ಲಿ ಕುಳಿತು ಟಿಕೆಟ್ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಹಿನ್ನೆಲೆ ಸಾರಿಗೆ ಬಸ್ ನಲ್ಲಿ ಮಹಿಳೆಯರದ್ದೇ ದರ್ಬಾರ್ ನಡೆಯುತ್ತಿದ್ದು, ನಿರ್ವಾಹಕರು ಫಜೀತ ಪಡುವಂತಾಗಿದೆ.