ಹೊಸದಿಗಂತ ಮಡಿಕೇರಿ:
ಕಳೆದ ಹಲವು ದಿನಗಳಿಂದ ಮರೆಯಾಗಿದ್ದ ಹುಲಿರಾಯ ದಕ್ಷಿಣಕೊಡಗಿನಲ್ಲಿ ಮತ್ತೆ ಪ್ರತ್ಯಕ್ಷಗೊಂಡಿದ್ದಾನೆ.
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿ ಕೋಣಗೇರಿ ಗ್ರಾಮದ ಚೆಕ್ಕೇರ ಸನ್ನಿ ಬೋಪಯ್ಯ ಅವರ ಕಾಫಿ ತೋಟದಲ್ಲಿ ಬುಧವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದೆ.
ಸನ್ನಿ ಬೋಪಯ್ಯ ಅವರ ತೋಟದಲ್ಲಿ ಸ್ಪ್ರಿಂಕ್ಲರ್ ಕೆಲಸ ಮಾಡುವ ಸಂದರ್ಭದಲ್ಲಿ ಕಾರ್ಮಿಕ ಮನು ಎಂಬವರಿಗೆ ಹುಲಿ ಗೋಚರಿಸಿರುವುದಾಗಿ ಹೇಳಲಾಗಿದೆ.
ಈ ಕುರಿತು ಅರಣ್ಯ ಇಲಾಖೆ ಮಾಹಿತಿ ನೀಡಿದರೂ, ಸ್ಥಳಕ್ಕೆ ಅಧಿಕಾರಿಗಳು ಬಾರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.