ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ನಟ ಜಗ್ಗೇಶ್ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಜಗ್ಗೇಶ್ಗೆ ನೊಟೀಸ್ ನೀಡಿದ್ದರು, ಆದರೆ ಇದಕ್ಕೆ ತಡೆ ನೀಡಬೇಕು ಎಂದು ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಜಗ್ಗೇಶ್ ಪರವಾಗಿ ಕೋರ್ಟ್ ಆದೇಶ ನೀಡಿದೆ. ಜಗ್ಗೇಶ್ ತಾಯಿ ಅವರಿಗೆ ಹುಲಿ ಉಗುರಿನ ಪೆಂಡೆಂಟ್ ನೀಡಿದ್ದರು, ಹುಲಿ ಉಗುರಿನ ಪೆಂಡೆಂಟ್ ವಿಷಯ ಮುನ್ನೆಲೆಗೆ ಬಂದಂತೆ, ಜಗ್ಗೇಶ್ ಪೆಂಡೆಂಟ್ ಧರಿಸಿರುವ ವಿಡಿಯೋ ವೈರಲ್ ಆಗಿತ್ತು.