ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿರುವ ನಟ ದರ್ಶನ್ಗೆ ಜೈಲಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಸದ್ಯ ಬ್ಯಾರಕ್ ನಂ.3ರ ಭದ್ರತಾ ಕೊಠಡಿಯಲ್ಲಿರುವ ದರ್ಶನ್, ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿ ಹಾಗೂ ಮೂವರು ಸಿಬ್ಬಂದಿಗಳ ಕಣ್ಗಾವಲಿನಲ್ಲಿದ್ದಾರೆ.
ಈ ನಡುವೆ ಸೋಮವಾರ ದರ್ಶನ್ಗೆ ಪತ್ನಿ ಹಾಗೂ ಮಗನ ಜೊತೆ ಮಾತನಾಡಲು 15 ನಿಮಿಷ ಅವಕಾಶ ನೀಡಲಾಗಿತ್ತು. ಅದಾದ ಬಳಿಕ ಜೈಲು ಅಧಿಕಾರಿಗಳು ಯಾರಿಗೂ ಭೇಟಿಗೆ ಯಾರಿಗೂ ಅವಕಾಶ ನೀಡಿಲ್ಲ. ಇನ್ನು ಊಟ, ತಿಂಡಿ ಕೂಡಾ ಕೊಠಡಿಗೇ ನೀಡಲಾಗುತ್ತಿದ್ದು, ಇತರ ಕೈದಿಗಳು ಕೂಡಾ ದರ್ಶನ್ ಬ್ಯಾರಕ್ ಬಳಿ ಬರದಂತೆ ನಿರ್ಬಂಧ ಹೇರಲಾಗಿದೆ.