ಚೀನಾ ಅಪ್ಲಿಕೇಷನ್‌ ನಿಷೇಧದ ಬೆನ್ನಲ್ಲೇ ಎಲ್ಲಾ ಭಾರತೀಯ ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿದ ಟಿಕ್‌ಟಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೂರು ವರ್ಷದ ಹಿಂದೆ ಭಾರತದಲ್ಲಿ ನಿಷೇಧ ಮಾಡಲ್ಪಟ್ಟಿದ್ದ ಚೀನಾದ ಟಿಕ್‌ ಟಾಕ್‌ ಕಂಪನಿ ಇದೀಗ ತನ್ನಲ್ಲಿನ ಎಲ್ಲ ಭಾರತೀಯ ಕೆಲಸಗಾರರನ್ನು ಹೊರಹಾಕಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ನೂರಕ್ಕೂ ಹೆಚ್ಚು ಚೀನಾ ಮೂಲದ ಅಪ್ಲಿಕೇಷನ್‌ ಗಳ ಮೇಲೆ ನಿಷೇಧ ಹೇರಿತ್ತು. ಇದರ ಬೆನ್ನಲ್ಲೇ ಟಿಕ್‌ಟಾಕ್‌ ನ ಈ ಘೋಷಣೆ ಬಂದಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಭಾರತ ಸರ್ಕಾರವು 2020ರಲ್ಲಿ ಬೈಟ್‌ಡಾನ್ಸ್‌ ಮಾಲೀಕತ್ವದ ಟಿಕ್‌ಟಾಕ್‌ ಅನ್ನು ನಿಷೇಧಿಸಿತ್ತು. ಪ್ರಸ್ತುತ ಟಿಕ್‌ಟಾಕ್‌ ನಲ್ಲಿ 40ಕ್ಕೂ ಹೆಚ್ಚು ಭಾರತೀಯರು ಉದ್ಯೋಗದಲ್ಲಿದ್ದರು. ಇದೀಗ ಈ ಎಲ್ಲರಿಗೂ ಟಿಕ್‌ ಟಾಕ್‌ ಪಿಂಕ್‌ ಸ್ಲಿಪ್‌ ನೀಡಿದೆ. ಫೆಬ್ರವರಿ 28 ಭಾರತೀಯ ಉದ್ಯೋಗಿಗಳ ಪಾಲಿಗೆ ಕೊನೆಯ ಕೆಲಸದ ದಿನವಾಗಲಿದೆ. 9 ತಿಂಗಳವರೆಗೆ ಸಂಬಳವನ್ನು ಬೆಂಬಲ ಕೊಡುಗೆ ನೀಡುವುದಾಗಿ ಹೇಳಿದೆ.

ಪ್ರಸ್ತುತ ಭಾರತ ಸರ್ಕಾರದ ನಿಲುವುಗಳಿಂದ ಭವಿಷ್ಯದಲ್ಲಿ ಪುನಃ ಭಾರತದಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳು ಕ್ಷೀಣವಾಗಿರುವುದರಿಂದ ಭಾರತದಲ್ಲಿ ಸಂಪೂರ್ಣವಾಗಿ ಮುಚ್ಚುತ್ತಿರುವುದಾಗಿ ಟಿಕ್‌ಟಾಕ್‌ ಘೋಷಿಸಿದೆ.

ಬಳಕೆದಾರರ ವೈಯುಕ್ತಿಕ ಡೇಟಾದ ದುರ್ಬಳಕೆ ವಿಚಾರದಲ್ಲಿ ಟಿಕ್‌ಟಾಕ್‌ ಮೇಲೆ ಜಗತ್ತಿನ ಇತರೆಡೆಗಳಲ್ಲಿಯೂ ಆರೋಪಗಳು ಕೇಳಿಬರುತ್ತಿವೆ. ಅಮೆರಿಕವು ಟಿಕ್‌ಟಾಕ್‌ ಅನ್ನು ನಿಷೇಧಿಸುವ ಕುರಿತು ಚಿಂತಿಸುತ್ತಿದೆ. ಈ ಕುರಿತು ಅಮೆರಿಕದ ಸಂಸತ್ತಿನಲ್ಲಿ ಚರ್ಚೆಗಳಾಗುತ್ತಿವೆ. ಇದೀಗ ಭಾರತ ಸರ್ಕಾರವು ಹೆಚ್ಚಿನ ಚೀನಾ ಅಪ್ಲಿಕೇಷನ್‌ ಗಳ ಮೇಲೆ ನಿಷೇಧ ಹೇರಿರುವುದರಿಂದ ಟಿಕ್‌ಟಾಕ್‌ ಎಲ್ಲಾ ಭಾರತೀಯ ಉದ್ಯೋಗಗಿಗಳನ್ನು ಹೊರಹಾಕಿ ಭಾರತದಿಂದ ಕಾಲ್ತೆಗೆಯಲು ಮುಂದಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!