ಟಿಪ್ಪರ್-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸಾವು

ಹೊಸದಿಗಂತ ವರದಿ, ಕುಶಾಲನಗರ:

ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಧಳದಲ್ಲೇ ಸಾವನ್ನಪ್ಪಿದ ಘಟನೆ ಹುದುಗೂರು- ಹಾರಂಗಿ ಮಾರ್ಗವಾಗಿ ಯಡವನಾಡು- ಸೋಮವಾರಪೇಟೆ ಕಡೆಗೆ ತೆರಳುವ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಯಡವನಾಡು ಗ್ರಾಮದ ನಿವಾಸಿ ಪ್ರವೀಣ್ ಅಲಿಯಾಸ್ ದೊರೆಮಣಿ(46) ಎಂದು ಗುರುತಿಸಲಾಗಿದೆ. ಯಡವನಾಡು ಕಡೆಯಿಂದ ಹಾರಂಗಿ ಕಡೆಗೆ ಬರುತ್ತಿದ್ದ ಟಿಪ್ಪರ್ ಕೆಎ19ಡಿ 5714ರ ಟಿಪ್ಪರ್ ಹಾಗೂ ಹಾರಂಗಿಯಿಂದ ಯಡವನಾಡು ಕಡೆಗೆ ಹೋಗುತ್ತಿದ್ದ ಕೆಎ02 ಹೆಚ್ ಯು 5912ರ ಬೈಕ್ ಪರಸ್ಪರ ಡಿಕ್ಕಿಯಾದ ಹಿನ್ನೆಲೆಯಲ್ಲಿ ದೊರೆಮಣಿ ಸ್ಧಳದಲ್ಲೇ ಸಾವಿಗೀಡಾದರು.

ಘಟನೆಗೆ ಸಂಬಂಧಿಸಿದಂತೆ 7ನೇ ಹೊಸಕೋಟೆ ನಿವಾಸಿ ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!