TIPS | ಪ್ರತಿನಿತ್ಯ ಒತ್ತಡದ ಜೀವನದಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡ್ತಿದ್ಯಾ? ಈ ಟಿಪ್ಸ್ ಟ್ರೈ ಮಾಡಿ

ದೈನಂದಿನ ಒತ್ತಡದಿಂದ, ವಿರಾಮವಿಲ್ಲದೆ ಕೆಲಸ ಮಾಡುವುದರಿಂದ ಕೆಲವು ಆರೋಗ್ಯ ಸಮಸ್ಯೆ ಬರುತ್ತದೆ. ನೋವು ನಿವಾರಕಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ದೇಹಕ್ಕೆ ಅಡ್ಡ ಪರಿಣಾಮಗಳ ಅಪಾಯವಿದೆ.

ಇಂತಹ ಸಣ್ಣಪುಟ್ಟ ನೋವುಗಳಿಗೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಔಷಧಗಳನ್ನು ತಯಾರಿಸಿ ಉಪಯೋಗಿಸಬಹುದು. ಅದು ಅಡ್ಡ ಪರಿಣಾಮ ಬೀರದ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ.

ಕೈ ನೋವು ಬಂದಾಗ ಬಿಸಿ ಹಾಲಿಗೆ ಅರಿಶಿನ ಪುಡಿ ಸೇರಿಸಿ ಕುಡಿಯಿರಿ. ಹಲ್ಲು ನೋವಿಗೆ ಲವಂಗವನ್ನು ಬಳಸಬೇಕು. ಸಂಧಿವಾತ ಇರುವವರು ಹಸಿ ಶುಂಠಿ ಬೆರೆಸಿದ ಗ್ರೀನ್ ಟೀಯನ್ನು ಕುಡಿಯಬೇಕು.

ಪುದೀನಾ ಎಣ್ಣೆ ತಲೆನೋವನ್ನು ನಿವಾರಿಸುತ್ತದೆ. ಬೆನ್ನು ನೋವು ಇರುವವರು ಕೂಡ ಮೊಟ್ಟೆ, ಹಾಲು, ಹಸಿ ತರಕಾರಿಗಳು, ಗ್ರೀನ್ಸ್ ಮತ್ತು ಡ್ರೈ ಫ್ರೂಟ್ಸ್ ತಿನ್ನಬೇಕು. ಹೆಣ್ಣು ಮಕ್ಕಳಿಗೆ ಮಾಸಿಕ ಹೊಟ್ಟೆ ನೋವು ಕಾಣಿಸಿಕೊಂಡರೆ ಅಲೋವೆರಾ ಜೆಲ್ ಜೊತೆಗೆ ಜೀರಿಗೆ ಪುಡಿ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳ ಕಾಲ ಸೇವಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!