VIDEO | ನಡುರಾತ್ರಿ ಮೈಮೇಲೆ ಒಂದಿಂಚೂ ಬಟ್ಟೆ ಇಲ್ಲದೆ ರಾಜಾರೋಷವಾಗಿ ಓಡಾಡಿದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಯುವತಿಯೊಬ್ಬಳು ಮೈಮೇಲೆ ಒಂದು ಚೂರು ಬಟ್ಟೆ ಇಲ್ಲದಂತೆ ಓಡಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ಮೋಹನ್‌ ನಗರದ ಜನನಿಬಿಡ ರಸ್ತೆಯಲ್ಲಿ ರಾತ್ರಿ ಸುಮಾರು 8 ರಿಂದ 9 ಗಂಟೆಗೆ ಯುವತಿಯೊಬ್ಬಳು ರಾಜಾರೋಷವಾಗಿ ಬೆತ್ತಲಾಗಿ ಓಡಾಡಿದ್ದಾಳೆ. ಈಕೆಯ ವರ್ತನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ವರದಿಗಳ ಪ್ರಕಾರ ಜೂನ್‌ 25 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, ಆ ಯುವತಿ ಏಕೆ ಬೆತ್ತಲಾಗಿ ರಸ್ತೆಗಿಳಿದಳು ಎಂಬುದು ಸ್ಪಷ್ಟವಾಗಿಲ್ಲ. ಆಕೆ ಯಾರು ಮತ್ತು ಬೆತ್ತಲಾಗಿ ರಸ್ತೆಯಲ್ಲಿ ಏಕೆ ತಿರುಗಾಡುತ್ತಿದ್ದಳು ಎಂಬ ಬಗ್ಗೆ ಇದೀಗ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಶಕ್ತಿ ಸಿಂಗ್‌ (@singhshakti1982) ಎಂಬವರು ಸಾಹಿಬಾಬಾದ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮೋಹನ್‌ ನಗರದಲ್ಲಿ ಮಹಿಳೆಯೊಬ್ಬರು ವಿವಸ್ತ್ರವಾಗಿ ತಿರುಗಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡು ಈ ಕುರಿತ ಪೋಸ್ಟ್‌ ಒಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!