TIPS | ಹಾಲು ಒಡೆದರೆ ವೇಸ್ಟ್ ಮಾಡ್ತಿದ್ದೀರಾ? ಇನ್ಮುಂದೆ ಹಿಂಗೆಲ್ಲಾ ಮಾಡೊಕೋಗಬೇಡಿ ಯಾಕೆ ಗೊತ್ತಾ?

ಹಾಲು ಒಡೆದರೆ ದಯವಿಟ್ಟು ಚೆಲ್ಲಬೇಡಿ. ಇದರಿಂದ ಅನೇಕ ಅನುಕೂಲಗಳಿವೆ. ಅದರಲ್ಲಿ ಇನ್ನೂ ಅನೇಕ ಪೋಷಕಾಂಶಗಳಿವೆ. ಒಡೆದ ಹಾಲಿನಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುತ್ತದೆ.

ಇದರಿಂದ ಹಿಟ್ಟು ಮೃದುವಾಗುತ್ತದೆ. ಚಪಾತಿ ರೊಟ್ಟಿ ಹಿಟ್ಟನ್ನು ಕಲಸುವಾಗ ಒಡೆದ ಹಾಲನ್ನು ಬಳಸುವುದರಿಂದ ಹಿಟ್ಟು ಮೃದುವಾಗುವುದಲ್ಲದೆ ಅದರ ಸ್ವಾದವನ್ನು ಹೆಚ್ಚಿಸುತ್ತದೆ.

ಇದು ನಿಮ್ಮ ಮುಖವನ್ನು ಸುಂದರಗೊಳಿಸಲು ಸಹ ಸೂಕ್ತವಾಗಿದೆ. ಒಡೆದ ಹಾಲಿನ ನೀರಿಗೆ ಕಡಲೆ ಹಿಟ್ಟು, ಅರಿಶಿನ ಮತ್ತು ಶ್ರೀಗಂಧದ ಪುಡಿ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಒಡೆದ ಹಾಲನ್ನು ಸ್ವಚ್ಚವಾದ ಬಟ್ಟೆಯಲ್ಲಿ ಕಟ್ಟಿಡಿ. ಕೆಲವು ಗಂಟೆಗಳಲ್ಲಿ ಪನ್ನೀರು ಸಿದ್ದವಾಗುತ್ತದೆ. ಒಡೆದ ಹಾಲಿನಿಂದ ಮೊಸರು ತಯಾರಿಸಬಹುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!