August 24, 2026
Monday, August 24, 2026
spot_img

TIPS |‌ ತಂದ ಎರಡೇ ದಿನಕ್ಕೆ ಬಾಳೆಹಣ್ಣು ಕಪ್ಪಾಗುತ್ತಿದೆಯೇ? ಹಾಗಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ!

ಬಾಳೆಹಣ್ಣು ಪ್ರತಿಯೊಬ್ಬರ ಮನೆಯಲ್ಲೂ ದಿನಬಳಕೆಗೆ ತರುವ ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಸಿಗುವ ಹಣ್ಣು. ಆದರೆ, ಇದನ್ನು ಮಾರುಕಟ್ಟೆಯಿಂದ ತಂದ 2-3 ದಿನಗಳಲ್ಲೇ ಅದು ಅತಿಯಾಗಿ ಹಣ್ಣಾಗಿ, ಸಿಪ್ಪೆಯಲ್ಲಾ ಕಪ್ಪಾಗಲು ಶುರುವಾಗುತ್ತದೆ. ಕೆಲವೊಮ್ಮೆ ಇಡೀ ಹಣ್ಣು ಮೆತ್ತಗಾಗುತ್ತದೆ.

ಬಾಳೆಹಣ್ಣುಗಳು ಬಿಡುಗಡೆ ಮಾಡುವ ‘ಎಥಿಲಿನ್’ ಎಂಬ ನೈಸರ್ಗಿಕ ಗ್ಯಾಸ್ ಈ ರೀತಿ ಹಣ್ಣು ಬೇಗ ಕಪ್ಪಾಗಲು ಮುಖ್ಯ ಕಾರಣವಾಗಿದೆ. ಹಾಗಾದರೆ, ಬಾಳೆಹಣ್ಣುಗಳನ್ನು ಕನಿಷ್ಠ ಒಂದು ವಾರದವರೆಗೂ ಕಪ್ಪಾಗದಂತೆ, ಫ್ರೆಶ್ ಆಗಿ ಇಡುವುದು ಹೇಗೆ? ಎಂಬುದನ್ನು ತಿಳಿಯೋಣ.

ಅಲ್ಯೂಮಿನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ರಾಪ್ ಹ್ಯಾಕ್

ಬಾಳೆಹಣ್ಣುಗಳು ಬೇಗ ಹಣ್ಣಾಗಲು ಅದರ ತೊಟ್ಟಿನ ಭಾಗದಿಂದ ಬಿಡುಗಡೆಯಾಗುವ ಎಥಿಲಿನ್ ಗ್ಯಾಸ್ ಕಾರಣ. ಹೀಗಾಗಿ, ಬಾಳೆಹಣ್ಣಿನ ಗೊಂಚಲಿನ ತೊಟ್ಟಿಗೆ ಕೇವಲ ಒಂದು ಚಿಕ್ಕ ಪ್ಲಾಸ್ಟಿಕ್ ಕವರ್ ಅಥವಾ ಅಲ್ಯೂಮಿನಿಯಂ ಫಾಯಿಲ್ ಅನ್ನು ಗಟ್ಟಿಯಾಗಿ ಸುತ್ತಿ ಇಡಬೇಕು. ಇದು ಗ್ಯಾಸ್ ಹರಡುವುದನ್ನು ತಡೆದು, ಹಣ್ಣು ಕಪ್ಪಾಗುವುದನ್ನು ಕನಿಷ್ಠ 4-5 ದಿನಗಳ ಕಾಲ ಮುಂದೂಡುತ್ತದೆ.

ಗೊಂಚಲಿನಿಂದ ಹಣ್ಣುಗಳನ್ನು ಬೇರ್ಪಡಿಸಿ

ನಾವು ಸಾಮಾನ್ಯವಾಗಿ ಇಡೀ ಬಾಳೆಹಣ್ಣಿನ ಗೊಂಚಲನ್ನು ಹಾಗೆಯೇ ಇಡುತ್ತೇವೆ. ಆದರೆ, ಹಣ್ಣುಗಳು ಒಂದಕ್ಕೊಂದು ಅಂಟಿಕೊಂಡಿದ್ದಾಗ ಎಥಿಲಿನ್ ಗ್ಯಾಸ್‌ನ ಪ್ರಭಾವ ಹೆಚ್ಚಾಗಿ ಎಲ್ಲಾ ಹಣ್ಣುಗಳು ಒಟ್ಟಿಗೆ ಬೇಗನೆ ಕಪ್ಪಾಗುತ್ತವೆ. ಆದ್ದರಿಂದ, ಮಾರುಕಟ್ಟೆಯಿಂದ ತಂದ ತಕ್ಷಣ ಹಣ್ಣುಗಳನ್ನು ಗೊಂಚಲಿನಿಂದ ಪ್ರತ್ಯೇಕಿಸಿ ಇಡುವುದರಿಂದ ಅವು ದೀರ್ಘಕಾಲ ತಾಜಾವಾಗಿರುತ್ತವೆ.

ಬಾಳೆಹಣ್ಣನ್ನು ನೇತುಹಾಕಿ ಇಡಿ

ಬಾಳೆಹಣ್ಣುಗಳನ್ನು ಡೈನಿಂಗ್ ಟೇಬಲ್ ಅಥವಾ ಬುಟ್ಟಿಯಲ್ಲಿ ಇಟ್ಟಾಗ, ಕೆಳಭಾಗದ ಹಣ್ಣುಗಳ ಮೇಲೆ ಒತ್ತಡ ಬಿದ್ದು ಅವು ಬೇಗನೆ ಮೆತ್ತಗಾಗುತ್ತವೆ ಮತ್ತು ಕಪ್ಪಾಗುತ್ತವೆ. ಬದಲಿಗೆ, ಮಾರುಕಟ್ಟೆಯಲ್ಲಿ ಮಾಡುವಂತೆ ಬಾಳೆಹಣ್ಣಿನ ಗೊಂಚಲನ್ನು ಹಗ್ಗ ಅಥವಾ ಕೊಂಡಿಯ ಸಹಾಯದಿಂದ ಗಾಳಿಯಲ್ಲಿ ನೇತುಹಾಕಬೇಕು. ಇದರಿಂದ ಹಣ್ಣುಗಳಿಗೆ ಸರಿಯಾಗಿ ಗಾಳಿ ಸಿಗುತ್ತದೆ ಮತ್ತು ಅವುಗಳ ಮೇಲೆ ಯಾವುದೇ ಒತ್ತಡ ಬೀಳುವುದಿಲ್ಲ.

ಇತರ ಹಣ್ಣುಗಳಿಂದ ದೂರವಿಡಿ

ಸೇಬು, ಪಪ್ಪಾಯಿ, ಮಾವಿನಹಣ್ಣು ಮತ್ತು ಟೊಮೆಟೊಗಳಂತಹ ಕೆಲವು ಹಣ್ಣು ಮತ್ತು ತರಕಾರಿಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಎಥಿಲಿನ್ ಗ್ಯಾಸ್ ಅನ್ನು ಬಿಡುಗಡೆ ಮಾಡುತ್ತವೆ. ಈ ಹಣ್ಣುಗಳ ಪಕ್ಕದಲ್ಲಿ ಬಾಳೆಹಣ್ಣನ್ನು ಇಟ್ಟರೆ, ಅವು ಹತ್ತಿರವಿರುವ ಬಾಳೆಹಣ್ಣನ್ನು ಅತಿ ವೇಗವಾಗಿ ಕಪ್ಪಾಗಿಸುತ್ತವೆ. ಆದ್ದರಿಂದ ಬಾಳೆಹಣ್ಣನ್ನು ಯಾವಾಗಲೂ ಇತರ ಹಣ್ಣುಗಳಿಂದ ಪ್ರತ್ಯೇಕವಾಗಿ ಇಡುವುದು ಒಳ್ಳೆಯದು.

ಫ್ರಿಡ್ಜ್‌ನಲ್ಲಿಡುವ ಸರಿಯಾದ ವಿಧಾನ

ಬಾಳೆಹಣ್ಣು ಸಂಪೂರ್ಣವಾಗಿ ಹಣ್ಣಾದ ನಂತರವೂ ಅದನ್ನು ಬಳಸದಿದ್ದರೆ, ಅದನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಫ್ರಿಡ್ಜ್‌ನ ತಂಪಾದ ವಾತಾವರಣವು ಹಣ್ಣು ಒಳಗಿನಿಂದ ಕಪ್ಪಾಗುವುದನ್ನು ತಡೆಯುತ್ತದೆ. ಆದರೆ ನೆನಪಿಡಿ, ಫ್ರಿಡ್ಜ್‌ನಲ್ಲಿ ಇಟ್ಟಾಗ ಬಾಳೆಹಣ್ಣಿನ ಹೊರಗಿನ ಸಿಪ್ಪೆ ಕಪ್ಪಾಗಬಹುದು, ಆದರೆ ಒಳಗಿನ ಹಣ್ಣು ಗಟ್ಟಿಯಾಗಿ ಮತ್ತು ತಿನ್ನಲು ಫ್ರೆಶ್ ಆಗಿಯೇ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !