ವೈಜ್ಞಾನಿಕವಾಗಿ ಹೇಳುವುದಾದರೆ, ನಾವು ಸೇವಿಸುವ ಸಾಮಾನ್ಯ ಆಹಾರವು 24 ಗಂಟೆಗಳಲ್ಲಿ ಜೀರ್ಣವಾಗುತ್ತದೆ. ನಿಖರವಾದ ಸಮಯವು ನೀವು ತಿನ್ನುವ ಆಹಾರವನ್ನು ಅವಲಂಬಿಸಿರುತ್ತದೆ. ಕಾರ್ಬೋಹೈಡ್ರೇಟ್‌ಗಳು ತ್ವರಿತವಾಗಿ ಜೀರ್ಣವಾಗುತ್ತವೆ.
ಮಾಂಸ ತಿಂದ ನಂತರ ಸಾಕಷ್ಟು ನೀರು ಕುಡಿಯಿರಿ. ಮಾಂಸವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ನೀರನ್ನು ಬಳಸಲಾಗುತ್ತದೆ.
ನಿಮ್ಮ ಆಹಾರವನ್ನು ಚೆನ್ನಾಗಿ ಅಗಿದು ತಿನ್ನಿರಿ. ಇದು ಜೀರ್ಣಾಂಗವ್ಯೂಹದ ಮೇಲಿನ ಹೊರೆ ಕಡಿಮೆ ಮಾಡುತ್ತದೆ. ಸೇವಿಸಿದ ಆಹಾರ ತ್ವರಿತವಾಗಿ ಜೀರ್ಣವಾಗುತ್ತದೆ. ಇದು ಮಾಂಸಾಹಾರಿ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಈ ಆಹಾರವನ್ನೂ ಚೆನ್ನಾಗಿ ಜಗಿದು ಸೇವಿಸಬೇಕು.