ತೂಕ ಇಳಿಸಿಕೊಳ್ಳಲು ಅನೇಕರು ವ್ಯಾಯಾಮ, ಡಯೆಟ್ ಸೇರಿದಂತೆ ಏನೇ ಮಾಡಿದ್ರೂ ತೂಕ ಮಾತ್ರ ಇಳಿಯುವುದಿಲ್ಲ. ಇದಕ್ಕೆ ಕಾರಣ ಅವರು ಅಳವಡಿಸಿಕೊಂಡಿರುವ ತಪ್ಪಾದ ವಿಧಾನ.
ತೂಕ ಇಳಿಸಲು ಹೆಚ್ಚಿನವರು ವ್ಯಾಯಾಮದ ಮೊರೆ ಹೋಗುತ್ತಾರೆ. ಪ್ರತಿ ದಿನವೂ ವ್ಯಾಯಾಮ ಮಾಡಿ ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ವ್ಯಾಯಾಮ ಮಾಡುವವರು ಎಷ್ಟು ಅವಶ್ಯಕವೋ ಅಷ್ಟು ವ್ಯಾಯಾಮ ಮಾಡಬೇಕು.
ನೀವು ತೂಕ ಇಳಿಸಲು ಬಯಸುವುದಾದರೆ ನಿಮ್ಮ ಆಹಾರದಲ್ಲಿ ಪ್ರೋಟೀನ್ ಅಂಶ ಇರುವುದು ಮುಖ್ಯ. ಪ್ರೋಟೀನ್ ಸೇವನೆಯಿಂದ ಮಾಂಸಖಂಡಗಳು ಗಟ್ಟಿಯಾಗುತ್ತವೆ. ನಿಮ್ಮ ಡಯೆಟ್ ನಲ್ಲಿ ಪ್ರೋಟೀನ್ ಯುಕ್ತ ಫುಡ್ ಸೇವನೆ ಮಾಡಿ.