ಮಕ್ಕಳು ರಾತ್ರಿ ಬೇಗ ನಿದ್ದೆ ಮಾಡಲ್ವಾ? ಹಾಗಿದ್ರೆ ಈ ರೀತಿ ಮಾಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿದ್ದೆ ದೇಹಕ್ಕೆ ಅತ್ಯಂತ ಅವಶ್ಯಕವಾದದ್ದು, ಇಡೀ ದಿನದ ನೋವು, ಆಯಾಸ ಮರೆಸುತ್ತದೆ. ಆದರೆ ಮಕ್ಕಳು ರಾತ್ರಿ ಬೇಗ ಮಲಗೋಕೆ ಗಲಾಟೆ ಮಾಡ್ತಾರೆ. ಅವರನ್ನು ನಿದ್ದೆಗೆ ಜಾರಿಸಲು ಅಮ್ಮಂದಿರುವ ಮೊಬೈಲ್, ಟಿವಿ ಮೊರೆ ಹೋಗಬೇಕು.. ನಿಮಗೂ ಹೀಗೆ ಆಗಿದ್ರೆ ಈ ರೀತಿ ಮಾಡಿ.
• ಮಕ್ಕಳನ್ನು ಬೆಳಗ್ಗೆ ಬಿಸಿಲಿನಲ್ಲಿ ಆಡಲು ಬಿಡಿ.
• ಸಂಜೆ, ಮಧ್ಯಾಹ್ನ ನಿದ್ದೆ ಮಾಡೋಕೆ ಬಿಡದಿರಿ.
• ಕಾಫಿ ಎಲ್ಲಾ ರೂಢಿ ಮಾಡಬೇಡಿ.
• ಮಲಗೋಕೆ- ಏಳೋಕೆ ಒಂದು ಸಮಯ ಫಿಕ್ಸ್ ಮಾಡಿ.
• ಬೆಡ್ ರೂಂ ಟೆಂಪರೇಚರ್, ಬೆಳಕು ಎಲ್ಲವನ್ನು ಸರಿ ಮಾಡಿ.
• ಮಲಗುವ ಮುನ್ನ ಹಾಲು ಕೊಡಿ.
• ಮಲಗುವ ಮುನ್ನ ಸ್ನಾನ ಮಾಡಲು ತಿಳಿಸಿ.
• ದಿನಕ್ಕೆ ಒಂದು ಹೊತ್ತಾದರು ವ್ಯಾಯಾಮ ಮಾಡಲು ಹೇಳಿ.
• ಮಲಗುವ ಮುಂಚೆ ಜಾಸ್ತಿ ನೀರು ಕುಡಿಯಬೇಡಿ.
• ಒಳ್ಳೆಯ ಹಾಸಿಗೆ, ದಿಂಬು ಇರಲಿ.
• ಕೆಲ ಹೊತ್ತು ಧ್ಯಾನ ಮಾಡಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!