ಶೂ ಧರಿಸಿದ ಮೇಲೆ ನಿಮ್ಮ ಪಾದಗಳಿಂದ ದುರ್ವಾಸನೆ ಬರ್ತಿದ್ಯಾ? ಹಾಗಿದ್ರೆ ಈ ಸಲಹೆಗಳನ್ನು ಪಾಲಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶೂ ಧರಿಸಿದ ಪಾದಗಳಿಂದ ದುರ್ವಾಸನೆ ಬರ್ತಿದೆ ಅಂತ ಯಾರಾದ್ರು ವ್ಯಂಗ್ಯ ಮಾಡಿದ್ದಾರಾ ? ಹಾಗಿದ್ರೆ ಈ ಸಲಹೆಗಳನ್ನು ಒಮ್ಮೆ ಪಾಲಿಸಿ ನೋಡಿ.

ಒಂದು ಅಗಲ ಪಾತ್ರೆಯಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ, ಆ ನೀರಿಗೆ ಒಂದು ಚಿಕ್ಕ ಕಪ್​ನಷ್ಟು ಅಡುಗೆ ಸೋಡಾ (ಬೇಕಿಂಗ್ ಸೋಡಾ) ಸೇರಿಸಿದ ಬಳಿಕ ಪಾದಗಳನ್ನು ನೀರಿನಲ್ಲಿ ನೆನೆಸಬೇಕು. 10-15 ನಿಮಿಷಗಳ ಬಳಿಕ ಪಾದಗಳನ್ನು ಹೊರತೆಗೆದು ಒಂದು ಕಾಟನ್ ಬಟ್ಟೆಯಿಂದ ಎಲ್ಲಿಯೂ ತೇವ ಇರದಂತೆ ಒರೆಸಿಕೊಳ್ಳಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ದುರ್ವಾಸನೆಯನ್ನು ತಡೆಗಟ್ಟಬಹುದು.

ಒಂದೆರಡು ಚಮಚ ವಿನೆಗರ್‌ ಹಾಕಿದ ಉಗುರು ಬೆಚ್ಚಗಿನ ಅರ್ಧ ಬಕೆಟ್ ನೀರಿನಲ್ಲಿ 15 ನಿಮಿಷಗಳವರೆಗೆ ಪಾದಗಳನ್ನು ನೆನೆಸಿ ಇಡುವುದರಿಂದ ಪಾದಗಳಿಂದ ಬರುವ ದುರ್ವಾಸನೆ ತಡೆಯಬಹುದು. ಈ ಕ್ರಮವನ್ನು ಹರಳುಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿಯೂ ಕೂಡ ಅನುಸರಿಸಬಹುದು.

ಪ್ರತಿದಿನ ಸಾಕ್ಸ್ ಬದಲಾಯಿಸುವುದು ಅತ್ಯಾವಶ್ಯಕವಾಗಿದ್ದು, ಒಮ್ಮೆ ಬಳಸಿದ ಸಾಕ್ಸ್​ ಅನ್ನು ತೊಳೆಯದೆ ಮತ್ತೆ ಬಳಸಬೇಡಿ. ಒದ್ದೆಯಾಗಿರುವ ಸಾಕ್ಸ್ ಯಾವುದೇ ಕಾರಣಕ್ಕೂ ಧರಿಸಬೇಡಿ. ಪಾದಗಳಿಗೆ ಗಾಳಿಯ ಸಂಪರ್ಕ ಇಲ್ಲದಿರುವುದೇ ದುರ್ವಾಸನೆಗೆ ಕಾರಣವಾಗಿದ್ದು, ದೀರ್ಘಕಾಲ ಶೂ ಹಾಕಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!