ಲಷ್ಕರ್-ಎ-ತೊಯ್ಬಾ, ಹಿಜ್ಬುಲ್ ಮುಜಹಿದ್ದೀನ್‌ ಸಕ್ರಿಯ ಕಮಾಂಡರ್‌ಗಳ ಮನೆಯಲ್ಲೂ ಹಾರಿತು ತಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಹೊಸ ಮೈಲಿಗಲ್ಲನ್ನು ಸಾಧಿಸಲಾಯಿತು. ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಹಿದ್ದೀನ್‌ನ ಸಕ್ರಿಯ ಭಯೋತ್ಪಾದಕ ಕಮಾಂಡರ್ ಗಳ ಕುಟುಂಬದ ಸದಸ್ಯರು ಕಣಿವೆಯಲ್ಲಿರುವ ತಮ್ಮ ನಿವಾಸಗಳಲ್ಲಿ ಭಾರತದ ರಾಷ್ಟ್ರಧ್ವಜಗಳನ್ನು ಹಾರಿಸಿದರು.

ಕಣಿವೆಯಲ್ಲಿ ಅದ್ಯಾವ ಮಟ್ಟಿಗಿನ ಭಯವಿತ್ತೆಂದರೆ, ಮನೆಗಳ ಮೇಲೆ ತಿರಂಗಾ ಹಾರಿಸುವುದು ಬಿಡಿ, ಬೀದಿಗಳಲ್ಲಿ ತಿರಂಗಾ ಕಾಣಿಸಿದರೂ, ಭೂಲೋಕದಲ್ಲಿ ಉಳಿಗಾಲವಿಲ್ಲ ಎನ್ನಿಸಿಬಿಡುತ್ತಿದ್ದರು ಉಗ್ರಗಾಮಿಗಳು. ಆದರೆ, ಈಗ ಉಗ್ರಗಾಮಿಗಳ ಮನೆಗಳಲ್ಲೇ ಇಂಥದ್ದೊಂದು ತಿರಂಗಾ ಕಾಣಿಸುತ್ತಿರುವುದು ಮೈಲಿಗಲ್ಲೇ ಆಗಿದೆ.

ಪುಲ್ವಾಮಾದ ಥ್ರಾಲ್‌ನ ಹರ್ದುಮಿರ್ ಗ್ರಾಮದಲ್ಲಿ ಸಕ್ರಿಯ ಭಯೋತ್ಪಾದಕರಾದ ಗೌಹರ್ ಮಂಜೂರ್ ಮಿರ್, ಥ್ರಾಲ್‌ನ ಮೊಂಗಮಾ ಗ್ರಾಮದಲ್ಲಿ ಆಸಿಫ್ ಶೇಖ್ ಮತ್ತು ಐಜಜ್ ಅಹ್ಮದ್ ಭಟ್ ಅವರ ಮನೆಗಳಲ್ಲಿ ತ್ರಿರಂಗವನ್ನು ಹಾರಿಸಲಾಯಿತು.
ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಕಣಿವೆಯ ಪ್ರತಿಯೊಬ್ಬ ಸಕ್ರಿಯ ಭಯೋತ್ಪಾದಕರ ನಿವಾಸಗಳಲ್ಲಿ ಧ್ವಜವನ್ನು ಹಾರಿಸಲಾಗುತ್ತದೆ ಎಂಬುದು ವಿಶೇಷ.

ರಿಯಾಜ್ ನೈಕೂ ಮನೆಯಲ್ಲೂ: ಇದಷ್ಟೇ ಅಲ್ಲ. ಹತ್ಯೆಗೀಡಾದ ಭಯೋತ್ಪಾದಕ ರಯಾಜ್ ನೈಕೂನ ತಂದೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಯ ಬೀಗ್ಪೋರಾ ಗ್ರಾಮದ ಅವರ ನಿವಾಸದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ್ದರು. 2020ರಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಯ ತನ್ನ ಗ್ರಾಮದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್‌ನಲ್ಲಿ ಹಿಜ್ಬುಲ್ ಮುಜಹಿದ್ದೀನ್ನ ಭಯೋತ್ಪಾದಕ ನೈಕೂ ಸಂಹಾರಗೊಂಡಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!