ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲಬಾಧೆ ತಾಳಲಾರದೆ ತಂದೆಯೊಬ್ಬರು ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗದಗದಲ್ಲಿ ನಡೆದಿದೆ.
ಇದೀಗ ಈ ನಾಲ್ಕು ಮೃತದೇಹಗಳನ್ನು ಅಗ್ನಿಶಾಮಕ ದಳದವರು ನದಿಯಿಂದ ಹೊರತೆಗೆದಿದ್ದಾರೆ. ಮೃತರನ್ನು ತಂದೆ ಮಂಜುನಾಥ್ (40) ಮತ್ತು ಮಕ್ಕಳಾದ ವೇದಾಂತ್ (3), ಧನ್ಯ (6) ಮತ್ತು ಪವನ್ (4) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹ, ಸಾಲಭಾದೆಯಿಂದ ಬೇಸತ್ತು ಮಕ್ಕುಂಪುರ ಗ್ರಾಮದ ಮಂಜುನಾಥ್ ಪತ್ನಿಯ ಅಣ್ಣನ ಮಗ ವೇದಾಂತ್ ಸೇರಿದಂತೆ ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರ ದುಃಖ ಮುಗಿಲು ಮುಟ್ಟಿದೆ.
ಈ ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.