September 9, 2026
Wednesday, September 9, 2026
spot_img

ಬೋರ್ ಹೊಡೆಯೋ ಬ್ರೆಡ್ ತಿಂದು ಸಾಕಾಯ್ತಾ? ಹಾಗಿದ್ರೆ ಆವಕಾಡೊ ಚಿಯಾ ಟೋಸ್ಟ್ ಟ್ರೈ ಮಾಡಿ

ಹೊಟ್ಟೆಯೂ ತುಂಬಿ ದೇಹಕ್ಕೂ ಸಖತ್ ಎನರ್ಜಿ ಕೊಡೋ ಈ ‘ಆವೊಕಾಡೊ ಚಿಯಾ ಟೋಸ್ಟ್’ ಒಮ್ಮೆ ಟ್ರೈ ಮಾಡಿ.

ಬ್ರೆಡ್

ಆವೊಕಾಡೊ

ಚಿಯಾ ಸೀಡ್ಸ್

ನಿಂಬೆಹಣ್ಣಿನ ರಸ

ಖಾರದ ಪುಡಿ

ಪೆಪ್ಪರ್

ಉಪ್ಪು

ಬಟರ್

ಮೊದಲು ತವಾ ಬಿಸಿ ಮಾಡಿ, ಸ್ವಲ್ಪ ಬಟರ್ ಸವರಿ ಬ್ರೆಡ್ ಸ್ಲೈಸ್‌ಗಳನ್ನು ಎರಡೂ ಕಡೆ ಚೆನ್ನಾಗಿ ಗೋಲ್ಡನ್ ಬ್ರೌನ್ ಬರೋವರೆಗೂ ಟೋಸ್ಟ್ ಮಾಡಿಕೊಳ್ಳಿ. ಈಗ ಆವೊಕಾಡೊವನ್ನು ಅರ್ಧಕ್ಕೆ ಕತ್ತರಿಸಿ, ಒಳಗಿರೋ ಬೀಜ ತೆಗೆದು, ಸ್ಪೂನ್‌ನಿಂದ ಒಳಗಿನ ಹಣ್ಣನ್ನು ಒಂದು ಬೌಲ್‌ಗೆ ಹಾಕಿ. ಅದಕ್ಕೆ ನಿಂಬೆಹಣ್ಣಿನ ರಸ, ಉಪ್ಪು, ಖಾರದ ಪುಡಿ ಮತ್ತು ಪೆಪ್ಪರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಟೋಸ್ಟ್ ಮಾಡಿದ ಬ್ರೆಡ್ ಮೇಲೆ ಈ ಆವೊಕಾಡೊ ಮಿಕ್ಸರ್ ಅನ್ನು ಸವರಿ. ಕೊನೆಯಲ್ಲಿ ಇದರ ಮೇಲೆ ಚಿಯಾ ಸೀಡ್ಸ್ ಅನ್ನು ಉದುರಿಸಿ. ನಿಮಗೆ ಇಷ್ಟವಿದ್ದರೆ ಸಣ್ಣಗೆ ಹೆಚ್ಚಿದ ಈರುಳ್ಳಿ-ಟೊಮೆಟೊ ಕೂಡ ಹಾಕಿಕೊಳ್ಳಬಹುದು.

ಈಗ ಬಿಸಿಬಿಸಿಯಾದ, ಹೆಲ್ದಿಯಾದ ಆವೊಕಾಡೊ ಚಿಯಾ ಟೋಸ್ಟ್ ಸವಿಯಲು ಸಿದ್ದ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !