ಇಂದು ವೈಕುಂಠ ಏಕಾದಶಿ: ತಿರುಮಲ ದೇಗುಲದಲ್ಲಿ ತೆರೆದ ವೈಕುಂಠ ದ್ವಾರ, ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಾದ್ಯಂತ ಇರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳು ಕಳೆಗಟ್ಟಿವೆ. ಇಂದು ವೈಕುಂಠ ಏಕಾದಶಿ ಹಿನ್ನೆಲೆ ಎಲ್ಲ ದೇವಾಲಯಗಳಲ್ಲೂ ವಿಸೇಷ ಅಲಂಕಾರ, ಪೂಜೆ ನೆರವೇರುತ್ತಿದೆ. ಅದೇ ರೀತಿ ತಿರುಮಲದಲ್ಲೂ ಕೂಡ ವೈಕುಂಠ ಏಕಾದಶಿಯನ್ನು ಆಚರಿಸಲು ಭಕ್ತರ ದಂಡೇ ಹರಿದು ಬರುತ್ತಿದೆ. ಇಂದು ತಿರುಮಲದ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರಗಳು ಮಧ್ಯರಾತ್ರಿ ತೆರೆದಿವೆ. ಪುರೋಹಿತರಿಂದ ಧನುರ್ಮಾಸ ವಿಶೇಷ ಪೂಜೆ, ಕಾರ್ಯಗಳು ನೆರವೇರುತ್ತಿವೆ. ತಿರುಮಲ ದೇವರ ದರ್ಶನ ಪಡೆಯಲು ವೈಕುಂಠ ದ್ವಾರದ ಮೂಲಕ ಭಕ್ತರು ಹರಿದು ಬರುತ್ತಿದ್ದಾರೆ. ಅರ್ಚಕರು ಭಗವಂತನ ಕೈಂಕರ್ಯಗಳನ್ನು ಪೂರೈಸಿದ ನಂತರ ಮಧ್ಯರಾತ್ರಿ 12.5 ಕ್ಕೆ ದರ್ಶನ ಪ್ರಾರಂಭವಾಯಿತು.

ವೈಕುಂಠದ ಮೂಲಕ ಸಚಿವರು, ಶಾಸಕರು, ಎಂಎಲ್ ಸಿಗಳು ಹಾಗೂ ಧರ್ಮದರ್ಶಿ ಮಂಡಳಿ ಸದಸ್ಯರು ಭೇಟಿ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 5ರಿಂದ 6ರವರೆಗೆ ಶ್ರೀವಾರಿ ವೈಕುಂಠದ ಮೂಲಕ ದರ್ಶನ ಟೋಕನ್ ಪಡೆಯುವ ಭಕ್ತರು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಶ್ರೀವಾರಿ ದರ್ಶನಕ್ಕೆ ಸಾಮಾನ್ಯ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಮುಕ್ಕೋಟಿ ಏಕಾದಶಿ ದಿನದಂದು ಭಗವಂತನ ದರ್ಶನ ಮಾಡಲು ಭಕ್ತರು ಮುಂಗಡವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಎಸ್‌ಎಸ್‌ಡಿ ಟೋಕನ್‌ಗಳನ್ನು ಪಡೆದಿದ್ದಾರೆ. ಇಂದಿನಿಂದ ಇದೇ 11ರವರೆಗೆ ಶ್ರೀವಾರಿ ವೈಕುಂಠ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಶ್ರೀವಾರಿ ದರ್ಶನಕ್ಕೆ ಟಿಟಿಡಿ ಸಕಲ ವ್ಯವಸ್ಥೆ ಮಾಡಿದೆ. ಮೊದಲಿಗೆ ವಿವಿಐಪಿ ಮತ್ತು ವಿಐಪಿ ದರ್ಶನದ ನಂತರ ಬೆಳಗ್ಗೆ 5 ಗಂಟೆಯಿಂದ ಸಾಮಾನ್ಯ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!