March 24, 2026
Tuesday, March 24, 2026
spot_img

ತಿರುಪತಿ ದೇವಸ್ಥಾನ ಈ ದಿನ 12 ಗಂಟೆ ಕಾಲ ಬಂದ್, ಯಾರಿಗೂ ಎಂಟ್ರಿ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿರುಪತಿ ತಿರುಮಲ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಮುಂಜಾನೆಯಿಂದ ರಾತ್ರಿವರೆಗೂ ತಿರುಮಲ ವೆಂಕಟೇಶ್ವರ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಾನೆ. ಆದರೆ ಸೆಪ್ಟೆಂಬರ್ 7 ರಂದು ಬರೋಬ್ಬರಿ 12 ಗಂಟೆ ಕಾಲ ತಿರುಮಲ ವೆಂಕಟೇಶ್ವರ ದೇವಸ್ಥಾನ ಸಂಪೂರ್ಣ ಮುಚ್ಚಲಾಗುತ್ತದೆ. 12 ಗಂಟೆಗಳ ಯಾರಿಗೂ ಪ್ರವೇಶವಿಲ್ಲ. ಭಕ್ತರಿಗೆ ಸೆಪ್ಟೆಂಬರ್ 8 ರಿಂದ ತಿರುಮಲ ದೇವಸ್ಥಾನ ಪ್ರವೇಶ ಮುಕ್ತವಾಗಲಿದೆ.

ಸೆಪ್ಟೆಂಬರ್ 7 ರಂದು ಚಂದ್ರ ಗ್ರಹಣ ಘಟಿಸಲಿದೆ. ರಾತ್ರಿ 9.30 ರಿಂದ ಮಧ್ಯರಾತ್ರಿ 1.31ರ ವರಗೆ ಚಂದ್ರಗ್ರಹಣ ಇರಲಿದೆ. ಚಂದ್ರಗ್ರಹಣ ಕಾರಣದಿಂದ ತಿರುಮಲ ವೆಂಕಟೇಶ್ವರ ದೇವಸ್ಥಾನವನ್ನು ಮುಚ್ಚಲಾಗುತ್ತಿದೆ. ಭಕ್ತರು ಸೇರಿದಂತೆ ಯಾರಿಗೂ ಪ್ರವೇಶ ಇರುವುದಿಲ್ಲ. 12 ಗಂಟೆ ಕಾಲ ದೇವಸ್ಥಾನ ಬಂದ್ ಆಗಲಿದೆ.

ಸೆಪ್ಟೆಂಬರ್ 7ರ ಮಧ್ಯಾಹ್ನ 3.30 ರಿಂದ ತಿರುಮಲ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಇನ್ನು ಸೆಪ್ಟೆಂಬರ್ 8ರ ಮುಂಜಾನೆ 3 ಗಂಟೆಗೆ ದೇವಸ್ಥಾನದ ಬಾಗಿಲು ತರೆಯಲಾಗುತ್ತದೆ. ಆದರೆ ಭಕ್ತರ ಪ್ರವೇಶಕ್ಕೆ ಸೆಪ್ಟೆಂಬರ್ 8ರ ಬೆಳಗ್ಗೆ 6 ಗಂಟೆಯಿಂದ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಈಗಾಗಲೇ ಬುಕಿಂಗ್ ಮಾಡಿರುವ ಸೇವೆಗಳನ್ನೂ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ರದ್ದು ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !