July 12, 2026
Sunday, July 12, 2026
spot_img

ಹಣದುಬ್ಬರ ತಡೆಯಲು ಸಾಹಸ: ಯುದ್ಧ ಕಾರ್ಮೋಡದ ನಡುವೆಯೂ ‘10 ಮಿಲಿಯನ್’ ಹೊಸ ನೋಟು ಬಿಡುಗಡೆ ಮಾಡಿದ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭುಗಿಲೆದ್ದಿರುವ ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಇರಾನ್ ಹೊಸ 10 ಮಿಲಿಯನ್ ಮೌಲ್ಯದ ರಿಯಾಲ್ ಕರೆಸನ್ಸಿಯನ್ನು ಬಿಡುಗಡೆ ಮಾಡಿದೆ.

ಇದು ಇರಾನ್‌ನ ಅತ್ಯಧಿಕ ಮುಖಬೆಲೆಯ ನೋಟು ಎಂದು ಗುರುತಿಸಿಕೊಂಡಿದೆ. ಯುದ್ಧದ ಬಿಸಿ ಇರಾನ್ ಆರ್ಥಿಕತೆ ಮೇಲೂ ಭಾರೀ ಪ್ರಭಾವ ಬೀರುತ್ತಿದ್ದು, ದೇಶದಲ್ಲಿನ ಹಣ ದುಬ್ಬರ ತಡೆಯಲು ಇರಾನ್ ಈ ಹೆಜ್ಜೆಯಿಟ್ಟಿದೆ.


ಇರಾನ್‌ನಲ್ಲಿ ಸದ್ಯ ಯುದ್ಧದಿಂದಾಗಿ ದಿನನಿತ್ಯ ಬಳಕೆ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಪ್ರಜೆಗಳ ದೈನಂದಿನ ವ್ಯವಹಾರ ವಹಿವಾಟುಗಳನ್ನು ಇನ್ನಷ್ಟು ಸುಲಭಗೊಳಿಸಲು ಈ ನೋಟನ್ನು ಪರಿಚಯಿಸಲಾಗಿದೆ ಎಂದು ಆಡಳಿತ ಹೇಳಿಕೊಂಡಿದೆ.

ಯುದ್ಧದ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಡಿಜಿಟಲ್ ಪಾವತಿ ಸೇವೆ ರದ್ದಾಗಬಹುದು ಎಂಬ ಆತಂಕದಲ್ಲಿರುವ ಜನತೆ ಆದಷ್ಟು ಪ್ರಮಾಣದಲ್ಲಿ ನಗದು ಹಣ ಪಡೆದುಕೊಳ್ಳಲು ಬ್ಯಾಂಕ್, ಎಟಿಎಂಗಳಿಗೆ ಧಾವಿಸುತ್ತಿರುವುದು ಕಂಡುಬರುತ್ತಿದೆ. ಈ ನಡುವೆ ಹೊಸ ನೋಟು ಬಿಡುಗಡೆಯಾಗಿದೆ.

ಇದು ಇರಾನ್‌ನ ಅತೀ ಹೆಚ್ಚು ಮುಖಬೆಲೆಯ ನೋಟು ಆಗಿದ್ದರೂ, ಭಾರತೀಯ ರೂಪಾಯಿ ಮುಂದೆ ಇದರ ಮೌಲ್ಯ 650 ಮಾತ್ರ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !