September 17, 2026
Thursday, September 17, 2026
spot_img

ನಿವೇಶನ ಕೊಂಡರೆ ತಿರುಪತಿ VIP ದರುಶನ? ರಿಯಲ್ ಎಸ್ಟೇಟ್ ಕಂಪನಿ ಗಿಮಿಕ್‌ಗೆ TTD ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ಹೆದ್ದಾರಿ ಬಳಿ ರಿಯಲ್ ಎಸ್ಟೇಟ್ ಯೋಜನೆ ಆರಂಭಿಸಿರುವ ಎಸ್‌ಸಿಪಿ ಡೆವಲಪರ್ಸ್ ಎಂಬ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ಹೊಸ ಹಾದಿ ಹಿಡಿದಿತ್ತು. ತಮ್ಮ ಲೇಔಟ್‌ನಲ್ಲಿ ಜಾಗ ಖರೀದಿಸಿದರೆ ಜೀವಮಾನವಿಡೀ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಯ VIP ಬ್ರೇಕ್ ದರ್ಶನ ಕಲ್ಪಿಸಿಕೊಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ಪ್ರಕಟಿಸಿತ್ತು. ಭಕ್ತಿ ಮತ್ತು ದೇವಸ್ಥಾನದ ಹೆಸರನ್ನು ಬಿಸಿನೆಸ್ ಪ್ರಚಾರಕ್ಕೆ ಬಳಸಿಕೊಂಡದ್ದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸುಳ್ಳು ಭರವಸೆ ನಂಬಬೇಡಿ ಎಂದ ಟಿಟಿಡಿ

ಈ ವಿವಾದಾತ್ಮಕ ಪ್ರಚಾರದ ವಿಷಯ ತಿಳಿದ ತಕ್ಷಣವೇ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ಕಾರ್ಯಪ್ರವೃತ್ತವಾಗಿದೆ. ಶ್ರೀವಾರಿಯ VIP ದರ್ಶನವನ್ನು ಯಾವುದೇ ಖಾಸಗಿ ವ್ಯಕ್ತಿ ಅಥವಾ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೀಡಲು ಅಥವಾ ಖಾತರಿಪಡಿಸಲು ಅಧಿಕಾರವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ದೇವರ ದರ್ಶನವನ್ನು ವ್ಯಾಪಾರಿ ಉದ್ದೇಶಕ್ಕೆ ಬಳಸಿಕೊಳ್ಳುವುದು ಕಾನೂನುಬಾಹಿರ ಹಾಗೂ ಅಪರಾಧವಾಗಿದೆ.

ಪೊಲೀಸ್ ದೂರು ಮತ್ತು ಕಠಿಣ ಕ್ರಮದ ಎಚ್ಚರಿಕೆ

ಗ್ರಾಹಕರನ್ನು ದಾರಿತಪ್ಪಿಸುವ ಸುಳ್ಳು ಪ್ರಚಾರ ನಡೆಸಿದ ಎಸ್‌ಸಿಪಿ ಡೆವಲಪರ್ಸ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಟಿಟಿಡಿ ಈಗಾಗಲೇ ಪೊಲೀಸರಿಗೆ ದೂರು ನೀಡಿದೆ. ಭಕ್ತರು ಇಂತಹ ಯಾವುದೇ ಆಮಿಷ ಅಥವಾ ಸುಳ್ಳು ಜಾಹೀರಾತುಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು ಎಂದು ಆಡಳಿತ ಮಂಡಳಿ ವಿನಂತಿಸಿದೆ. ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಠಿಣ ಚರ್ಯೆ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !