ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್‌ರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ಟಿಎಂಸಿ ಸಂಸದರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸದನದ ಅಧ್ಯಕ್ಷ ಜಗದೀಪ್ ಧನ್ಖರ್ ಘೋಷಣೆ ಮಾಡಿದ್ದಾರೆ.
ಸಭಾಪತಿಗಳಿವೆ ಅವಿಧೇಯತೆ ತೋರಿದ್ದಕ್ಕಾಗಿ, ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಹಾಗೂ ಕಲಾಪಗಳಿಗೆ ನಿರಂತರ ತೊಂದರೆ ನೀಡಿದ್ದಕ್ಕಾಗಿ ಡೆರೆಕ್ ಅವರನ್ನು ಅಮಾನತುಗೊಳಿಸುವಂತೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮನವಿ ಮಾಡಿದ್ದರು. ಅಮಾನತು ಆದೇಶದ ನಂತರವೂ ಸಾಕಷ್ಟು ಗದ್ದಲ ನಡೆದಿದೆ.