ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಲೋಕಸಭೆ ಸದಸ್ಯತ್ವ ರದ್ದಾಗಿದೆ.

ವಿಪಕ್ಷಗಳ ತೀವ್ರ ಗದ್ದಲ ಹಾಗೂ ಪ್ರತಿಭಟನೆ ನಡುವೆಯೂ ಲೋಕಸಭೆ ಶಿಸ್ತು ಸಮಿತಿ ವರದಿಯ ಶಿಫಾಸರನ್ನು ಬಹುಮತದಿಂದ ಅಂಗೀಕರಿಸಿದೆ.

ಹೀರಾನಂದನಿ ಕಂಪನಿ ಮುಖ್ಯಸ್ಥ, ಉದ್ಯಮಿ ದರ್ಶನ್ ಹೀರಾನಂದನಿಗೆ ಲೋಕಸಭೆಯ ಲಾಗಿನ್ ವಿವರ ನೀಡಿದ ಕಾರಣಕ್ಕೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದಾಗಿದೆ.

ಕೇಂದ್ರ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರಮಣಕಾರಿ ಭಾಷಣ ಮಾಡುತ್ತಿದ್ದ ಮಹುವಾ ಮೊಯತ್ರಾ ಪ್ರಶ್ನೆಗಾಗಿ ಲಂಚ ಪಡೆದ ಗಂಭೀರ ಆರೋಪ ಎದುರಿಸಿದ್ದರು. ಹಣ, ಇತರ ಸೌಕರ್ಯಗಳನ್ನು ಪಡೆದು ಮೊಹುವಾ ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ ಅನ್ನೋ ಗಂಭೀರ ಆರೋಪವನ್ನು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಲು ಲೋಕಸಭಾ ಸಭಾಪತಿ 6 ಸದಸ್ಯರ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿಯನ್ನು ಇಂದು ಸಂಸದ ವಿನೋದ್‌ ಕುಮಾರ್‌ ಸೋನ್‌ಕರ್‌ ಲೋಕಸಭೆಯಲ್ಲಿ ಮಂಡಿಸಿದ್ದರು.

ಈ ವರದಿ ಮಂಡನೆ ವೇಳೆ ತೀವ್ರ ಗದ್ದಲ ಏರ್ಪಟ್ಟಿತ್ತು. ಹೀಗಾಗಿ 2 ಗಂಟೆ ಕಾಲ ಸದನ ಮುಂದೂಡಲಾಗಿತ್ತು. ಮತ್ತೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಗದ್ದಲ ಆರಂಭಗೊಂಡಿತು. ಚರ್ಚೆಗೆ ಅವಕಾಶ ನೀಡಲಾಗಿತ್ತು. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಸುದೀಪ್ ಬಂಡೋಪಾದ್ಯಾಯ್, ಜೆಡಿಯು ಸಂಸದ ಗಿರಿಧರಿ ಯಾದವ್ ಸೇರಿದಂತೆ ವಿಪಕ್ಷಗಳ ಸದಸ್ಯರು ಸಮಿತಿ ಶಿಫಾರಸನ್ನು ವಿರೋಧಿಸಿದ್ದಾರೆ. ಬಿಜೆಪಿ ನಾಯಕರು ಸಮಿತಿ ಶಿಫಾರಸನ್ನು ಬೆಂಬಲಿಸಿದ್ದಾರೆ.

ಲೋಕಸಭೆಯಲ್ಲಿ ಬಹುಮತದ ಮೂಲಕ ಲೋಕಸಭೆ ಶಿಸ್ತು ಸಮಿತಿ ಮಾಡಿದ ಶಿಫಾರಸನ್ನು ಲೋಕಸಭೆ ಅಂಗೀಕರಿಸಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!