Monday, August 15, 2022

Latest Posts

ಬಂಡೂರು ಕುರಿಗೆ ಬಂಪರ್ ರೇಟ್ : 1.5 ಲಕ್ಷ ರೂ. ನೀಡಿ ಖರೀದಿಸಿದ ಮುಬಾರಕ್

ಹೊಸದಿಗಂತ ವರದಿ, ಮಂಡ್ಯ:

ಬಂಡೂರು ಕುರಿಗೆ ಬಂಪರ್ ರೇಟ್ ಬಂದಿದೆ. ಬಂಡೂರು ಕುರಿ 1.5 ಲಕ್ಷ ರೂ.ಗಳಿಗೆ ಮಾರಾಟವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸಾಮಾನ್ಯವಾಗಿ 20 ರಿಂದ 40 ಸಾವಿರ ರೂ.ಗಳಿಗೆ ಕುರಿಗಳು ಮಾರಾಟವಾಗುವುದೇ ಹೆಚ್ಚು. ಆದರೆ ಬಂಡೂರು ಕುರಿಗೆ ಇನ್ನೂ ಬೇಡಿಕೆ ಇದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ.
ಮಳವಳ್ಳಿ ತಾಲೂಕಿನಲ್ಲಿ ಸರ್ಕಾರದ ಬಂಡೂರು ಕುರಿ ಸಾಕಾಣಿಕೆ ಕೇಂದ್ರವಿದೆ. ಈ ಕೇಂದ್ರದಲ್ಲಿ ಕುರಿ ಮರಿಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಕುರಿ ಸಾಕಾಣಿಕೆ ಕೇಂದ್ರದಲ್ಲಿ ಕೆಜಿಗೆ ದರವನ್ನು ನಿಗದಿ ಮಾಡಲಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ನಗರದ ಕ್ಯಾತುಂಗೆರೆಯ ರೈತ ಶರತ್ ಎಂಬುವರು ಕುರಿ ಸಾಕಾಣಿಕೆ ಕೇಂದ್ರದಿಂದ 20 ಸಾವಿರ ರೂ.ಗಳಿಗೆ ಕುರಿ ಮರಿಗಳನ್ನು ಖರೀದಿಸಿ ಉತ್ತಮ ರೀತಿಯಲ್ಲಿ ಸಾಕಾಣಿಕೆ ಮಾಡಿದ್ದರು.
ಇದರಿಂದಾಗಿ ಕುರಿಗಳು ಸಹ ಮಜಬೂತಾಗಿ ಬೆಳೆದಿವೆ. ಈಗ ಅವುಗಳಿಗೆ ಭಾರೀ ಬೇಡಿಕೆ ಬಂದಿದೆ. ಈ ಕುರಿಗಳನ್ನು ಮಂಡ್ಯದ ಮುಬಾರಕ್ ಬಾಬು ಎಂಬುವರು 1.5 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ. ಈ ಬೆಲೆ ಹಲವರ ಹುಬ್ಬೇರುವಂತೆ ಮಾಡಿದ್ದು ಸತ್ಯ. ಕುರಿ ಸಾಕಾಣಿಕೆಯಿಂದಲೂ ಹೆಚ್ಚು ಲಾಭ ಗಳಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss