ಹೊಸ ದಿಗಂತ ವರದಿ, ಉಡುಪಿ:
ಗುರುವಾರ ಸಂಜೆ ಬೀಸಿದ ಭಾರಿ ಗಾಳಿಗೆ ಕಾಪು ತಾಲೂಕಿನ ಮಲ್ಲಾರು ಬಳಿ ಬೃಹತ್ ಮರವೊಂದು ರಸ್ತೆ ಬಿದ್ದು, ಇಬ್ಬರು ಮರದ
ಅಡಿಯಲ್ಲಿ ಸಿಲುಕಿರುವ ಘಟನೆ ಸಂಭವಿಸಿದೆ.
ಚಂದ್ರನಗರದಿಂದ ಮಜೂರಿಗೆ ತೆರಳುವ ರಸ್ತೆ ಮಧ್ಯೆ ಮಲ್ಲಾರು ಎಂಬಲ್ಲಿ ಬೃಹತ್ ಮರ ರಸ್ತೆಗೆ ಬಿದ್ದಿದ್ದು, ರಿಕ್ಷಾದಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಮರದ ಅಡಿಗೆ ಸಿಲುಕಿದ್ದಾರೆ.
ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಸ್ಥಳಕ್ಕೆ ಕಾಪು ಪೋಲಿಸರು ಭೇಟಿ ನೀಡಿದ್ದಾರೆ. ಕಾಪು, ಮಜೂರು, ಮಲ್ಲಾರು, ಚಂದ್ರನಗರವಾಗಿ ಶಿರ್ವಕ್ಕೆ ತೆರಳುವ ರಸ್ತೆಯೂ ಬಂದ್ ಆಗಿದೆ.