Monday, August 15, 2022

Latest Posts

ಕುಮಟಾಕ್ಕೆ ಪ್ರವಾಸಕ್ಕೆ ಬಂದಿದ್ದ ನಾಲ್ವರ ನೀರುಪಾಲು

ಹೊಸ ದಿಗಂತ ವರದಿ , ಕುಮಟಾ:

ಬೆಂಗಳೂರಿನಿಂದ ಕುಮಟಾಕ್ಕೆ ಪ್ರವಾಸಕ್ಕೆಂದು ಬಂದು, ಸಮುದ್ರದಲ್ಲಿ ಈಜುತ್ತಿರುವಾಗ ಅಲೆಯ ರಭಸಕ್ಕೆ ಆಕಸ್ಮಿಕವಾಗಿ ನಾಲ್ವರು ನೀರು ಪಾಲಾಗಿ, ಇಬ್ಬರ ಮೃತ ದೇಹ ಪತ್ತೆಯಾಗಿದೆ.

ಬೆಂಗಳೂರು ಬೈಪಾಸ್ ರಸ್ತೆಯ ಕಸ್ತೂರಿನಗರ ನಿವಾಸಿ ಸಿ.ಎ.ಫಾರ್ಮ್ ನೌಕರ ಅರ್ಜುನ್ ವಾಸುದೇವ (23), ಬೆಂಗಳೂರಿನ ಪೀಣ್ಯ 2 ನೇ ಕ್ರಾಸ್‌ನ ಸಿಎ ವಿದ್ಯಾರ್ಥಿನಿ ಚೈತ್ರಶ್ರೀ ಗೋಪಾಲ್ ಎಂ (22) ಮೃತಪಟ್ಟವರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರ ಹಾಲಿ ಜೆ.ಪಿ.ನಗರ ಸಿ.ಎ ವಿದ್ಯಾರ್ಥಿ ತೇಜಸ್ ದಾಮೋದರ ಎ (22), ಬೆಂಗಳೂರಿನ ಕನಕಪುರ ರಸ್ತೆಯ ಸಿ.ಎ.ಫಾರ್ಮ್ ನೌಕರ ಕಿರಣಕುಮಾರ್ ಮರಿರಾಜ ಜಿ (27) ನಾಪತ್ತೆಯಾದವರಾಗಿದ್ದಾರೆ.

ಬೆಂಗಳೂರಿನಿಂದ 89 ಸ್ನೇಹಿತರ ಗುಂಪೊಂದು ಪ್ರವಾಸಕ್ಕೆಂದು ಬಾಡ ಸಮೀಪದ ಖಾಸಗಿ ರೆಸಾರ್ಟ್ ಗೆ ಆಗಮಿಸಿದ್ದರು. ಚೈತ್ರಶ್ರೀ ಎಂಬ ಯುವತಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ರಕ್ಷಿಸಿ, ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಅರ್ಜುನ್ ವಾಸುದೇವ ಎಂಬಾತನ ಮೃತ ದೇಹ ದೊರೆತಿದ್ದು, ಇನ್ನಿಬ್ಬರ ಮೃತ ದೇಹಕ್ಕಾಗಿ ಪೊಲೀಸರು ಮತ್ತು ಕರಾವಳಿ ಕಾವಲು ಪಡೆಯ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಪಿ.ಐ ತಿಮ್ಮಪ್ಪ ನಾಯ್ಕ, ಪಿ.ಎಸ್.ಐಗಳಾದ ನವೀನ ನಾಯ್ಕ, ರವಿ ಗುಡ್ಡಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss