ಹಣ ಕದ್ದರೆಂದು ಬಾಲಕರಿಗೆ ಮೂತ್ರ ಕುಡಿಸಿ, ಖಾಸಗಿ ಅಂಗಕ್ಕೆ ಖಾರಪುಡಿ ಹಾಕಿ ವಿಕೃತಿ ಮೆರೆದ ದುಷ್ಕರ್ಮಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೌಲ್ಟ್ರಿ ಫಾರ್ಮ್‌ನಿಂದ ಕೋಳಿ ಕದ್ದಿದ್ದಾರೆ ಅನ್ನೋ ಆರೋಪದಡಿ ಇಬ್ಬರು ಬಾಲಕರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಅವರಿಗೆ ಬಾಟಲಿಯಲ್ಲಿಟ್ಟ ಮೂತ್ರವನ್ನು ಕುಡಿಸಿದ್ದು ಮಾತ್ರವಲ್ಲ, ಖಾಸಗಿ ಅಂಗಕ್ಕೆಖಾರಪುಡಿಯನ್ನು ಹಾಕಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಸಿದ್ದಾರ್ಥ್‌ನಗರದಲ್ಲಿ ನಡೆದಿದೆ.

ಕಳ್ಳತನದ ಶಂಕೆಯ ಮೇಲೆ 10 ಮತ್ತು 15 ವರ್ಷದ ಬಾಲಕರ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಭಯಾನಕ ದೃಶ್ಯದ ವೀಡಿಯೋಗಳು ವೈರಲ್‌ ಆಗಿದೆ. ಹಣ ದೋಚಿದ್ದಾರೆ ಎಂದು ಆರೋಪಿಸಿ ಗೂಂಡಾಗಳು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದರು ಎನ್ನಲಾಗಿದೆ.

ಪೌಲ್ಟ್ರಿಫಾರ್ಮ್‌ನಲ್ಲಿನ ಕಂಬಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು, ತೀವ್ರವಾಗಿ ಥಳಿಸಿದ್ದಾರೆ.ಬಳಿಕ ಒತ್ತಾಯಪೂರ್ವಕವಾಗಿ ಮೆಣಸಿನ ಕಾಯಿಯನ್ನು ಕಚ್ಚಿ ಕಚ್ಚಿ ತಿನ್ನುವಂತೆ ಮಾಡಿದ್ದಾರೆ. ಈ ಕ್ರೂರತೆ ಬಳಿಕ ಬಾಟಲಿಯಲ್ಲಿ ತುಂಬಿದ್ದ ಮೂತ್ರವನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾರೆ. ತೀವ್ರವಾಗಿ ನೋವಿನಿಂದ ಚೀರಾಡುತ್ತಿರುವ ಬಾಲಕರು ಬಿಟ್ಟು ಬಿಡುವಂತೆ ಪರಿಪರಿಯಾಗಿ ಬೇಡಿದ್ದಾರೆ. ಆದರೆ ಬಾಲಕರ ಮನಿವಿಗೆ ಕಿವಿಗೊಡದೆ ವಿಕೃತಿ ಮೆರೆದಿದ್ದಾರೆ. ಇದರ ಜೊತೆಗೆ ಸಂಪೂರ್ಣ ವಿಕೃತಿಯ ವಿಡಿಯೋವನ್ನು ಮಾಡಿ ವ್ಯಾಟ್ಸ್ಆ್ಯಪ್ ಮೂಲಕ ಹರಿಬಿಟ್ಟಿದ್ದಾರೆ.

ಈರೀತಿ ಸಿದ್ದಾರ್ಥ್‌ನಗರ ಪೊಲೀಸ್ ಸಿಬ್ಬಂದಿಯ ಗ್ರೂಪ್ ಗೂ ಬಂದಿದ್ದು, ಈ ವಿಡಿಯೋ ಹಾಗೂ ಮಾತುಗಳನ್ನು ಆಲಿಸಿದ ಪೊಲೀಸ್ ಜಿಲ್ಲೆಯಲ್ಲಿ ನಡೆದಿರುವ ಅನುಮಾನವನ್ನು ವ್ಯಕ್ತಪಡಿಸಿ ವಿಡಿಯೋವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಫಾರ್ವರ್ಡ್ ಮಾಡಿದ್ದಾರೆ.

ಪ್ರಕರಣ ದಾಖಳಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೌಲ್ಟ್ರಿ ಫಾರ್ಮ್ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದುವರೆಗೆ 6 ಆರೋಪಿಗಳನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಗೊಂಡಿದೆ.

ಆರೋಪಿಗಳ ಪ್ರಕಾರ, ಇಬ್ಬರು ಬಾಲಕರು ಕೋಳಿಯನ್ನು ಕದ್ದು, ಕ್ಯಾಶ್ ಕೌಂಟರ್‌ನಿಂದ ಹಣ ಎಗರಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ಗಮನಿಸಿದ ಕೋಳಿ ಫಾರ್ಮ್ ಸಿಬ್ಬಂದಿಗಳು ಬಾಲಕರಿಬ್ಬರನ್ನು ಅಟ್ಟಾಡಿಸಿಕೊಂಡು ಹಿಡಿದಿದ್ದಾರೆ. ಇಬ್ಬರು ಬಾಲಕರಿಗೆ ಪಾಠ ಕಲಿಸಲು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!