Monday, October 2, 2023

Latest Posts

ಪಾಕಿಸ್ತಾನದಲ್ಲಿ ಹಳಿ ತಪ್ಪಿದ ರೈಲು: 15 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ನವಾಬ್​ಶಾಹ್​ನಲ್ಲಿ ಹಜಾರಾ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. 50 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಕರಾಚಿಯಿಂದ 275 ಕಿಲೋಮೀಟರ್ ದೂರದಲ್ಲಿರುವ ಸಹಾರಾ ನಿಲ್ದಾಣದ ಬಳಿ ರಾವಲ್ಪಿಂಡಿಗೆ ತೆರಳುತ್ತಿದ್ದ ರೈಲಿನ ಹತ್ತು ರೈಲು ಬೋಗಿಗಳು ಹಳಿ ತಪ್ಪಿದೆ.

ಈ ನಿಲ್ದಾಣವು ಶಹಜಾದ್‌ಪುರ ಮತ್ತು ನವಾಬ್‌ಶಾಹ್ ನಡುವೆ ಇದೆ. ರೈಲು ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮೀಪದ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!