ಹೊಸ ದಿಗಂತ ವರದಿ, ಕಲಬುರಗಿ:
ಮುಂಬರುವಂತಹ ಬಜೆಟ್ ಸಹಕಾರ ಕ್ಷೇತ್ರದ ಬಲವರ್ದನೆಗೆ ಕಾರ್ಯಕ್ರಮಗಳನ್ನು ರೂಪಿಸುವಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿ ಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸಹಕಾರ ಕ್ಷೇತ್ರ, ಅದರಲ್ಲೂ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ಗಳ ಸುಧಾರಣೆ ಹಾಗೂ ಬಲವರ್ಧನೆ ಹಲವಾರು ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವಂತೆ ಬೆಂಗಳೂರಿನಲ್ಲಿ ಸಹಕಾರ ಸಚಿವ ಎಸ್..ಟಿ ಸೋಮಶೇಖರ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ ಹಾಗೂ ಕಲಬುರಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ,ಹಾಗೂ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ನೇತೃತ್ವದಲ್ಲಿ ಅಪೆಕ್ಸ್ ನಿರ್ದೇಶಕರುಗಳ ಹಾಗೂ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರುಗಳ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಸಹಕಾರಿ ಸಂಸ್ಥೆಗಳ ಗಣಕೀಕರಣ, ಸಾಲದ ಪ್ರಮಾಣ ಹೆಚ್ಚಳ, ಗ್ಯಾಪ್ ಫಿಲ್ಲಿಂಗ್ ಹಾಗೂ ಇತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಜೊತೆಗೇ ಹೊಸ ಯೋಜನೆಗಳನ್ನು ರೂಪಿಸುವಂತೆ ವಿಸ್ತೃತ ವರದಿಯ ನ್ನು ಸಿಎಂ ಅವರಿಗೆ ಸಲ್ಲಿಸಿ ತದನಂತರ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಮನವಿಯನ್ನು ಸುದೀರ್ಘ ವಾಗಿ ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಿಯೋಗದ ಸಭೆ ನಡೆಸಿದರು.
ನಿಯೋಗದ ವರದಿ ಕಾರ್ಯಾನುಷ್ಢಾನ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಹಾಗೂ ಹೊಸ ಯೋಜನೆಗಳ ಕುರಿತು ತಮಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಡಿಸಿಸಿ ಬ್ಯಾಂಕ್ ಗಳ ಅಧ್ಯಕ್ಷರಾದ ಡಾ. ರಾಜೇಂದ್ರಕುಮಾರ, ವಿಜಯಕುಮಾರ ಸರನಾಯಕ, ಶಿವಾನಂದ ಪಾಟೀಲ್, ಉಮಾಕಾಂತ ನಾಗಮಾರಪಳ್ಳಿ ಸೇರಿದಂತೆ ಮುಂತಾದವರು ನಿಯೋಗದಲ್ಲಿದ್ದರು.