February 17, 2026
Tuesday, February 17, 2026
spot_img

TRAVEL | ಮೆಂಟಲ್‌ ಹೆಲ್ತ್‌ ಗಟ್ಟಿಯಾಗೋಕೆ ವರ್ಷಕ್ಕೊಮ್ಮೆಯಾದ್ರೂ ಟ್ರಿಪ್‌ ಹೋಗ್ಬೇಕಂತೆ!

ಬೆಳಗ್ಗೆ ಎದ್ದ ಎರಡು ಗಂಟೆಯಲ್ಲಿ ಮನೆ ಬಿಟ್ಟು ಅರ್ಜೆಂಟ್‌ ಅರ್ಜೆಂಟ್‌ ಆಗಿ ಆಫೀಸ್‌ಗೆ ಹೋಗೋದು, ಆಫೀಸ್‌ನಿಂದ ಅರ್ಜೆಂಟ್‌ ಅರ್ಜೆಂಟ್‌ ಆಗಿ ಮನೆಗೆ ಬರೋದು! ಬಂದ ನಂತರ ಒಂದೆರಡು ಗಂಟೆ ಟೈಮ್‌ಪಾಸ್‌ ಮಾಡಿ ಮಲಗೋದು. ವೀಕೆಂಡ್‌ ಫ್ರೀ ಆಗ್ತೀವಲ್ಲ ಅಂತ ಅನ್ಕೊಂಡು ವಾರವಿಡೀ ತಳ್ಳೋದು, ವೀಕೆಂಡ್‌ನಲ್ಲಿ ಮುಂಚೆಯೇ ಡಿಸೈಡ್‌ ಆಗಿರುವ ಮದುವೆಗೋ, ನಾಮಕರಣಕ್ಕೋ ಹೋಗಿ ಬರೋದು! ಮತ್ತೆ ಬಂದೇ ಬಿಡ್ತು ಸೋಮವಾರ..

ಇದು ಬರೀ ರೊಟೀನ್‌ ಅಲ್ಲ, ರಿಟೈರ್‌ ಆಗೋವರೆಗೂ ನಮ್ಮ ನಿಮ್ಮ ಲೈಫ್‌! ಓದೋಕೇನೇ ಭಯ ಅನಿಸುತ್ತೆ ಅಲ್ವಾ? ಜೀವನದಲ್ಲಿ ರೊಟೀನ್‌ ಇರಲೇಬೇಕು, ಬಟ್‌ ಎಲ್ಲೂ ಹೋಗದೇ ಅದೇ ಮನೆ, ಆಫೀಸ್‌, ಸ್ಕೂಲ್‌, ಕಾಲೇಜ್‌ ಅಂತಿದ್ರೆ ಹೇಗೆ? ಮಾನಸಿಕವಾಗಿ ಸದಾ ಗಟ್ಟಿಯಾಗೊರೋಕೆ ಆರು ತಿಂಗಳಿಗೊಮ್ಮೆಯಾದ್ರೂ ಒಂದು ಲಾಂಗ್‌ ಟ್ರಿಪ್‌ ಮಾಡಿ. ಆರು ತಿಂಗಳಿಗೆಲ್ಲ ಆಗೋದಿಲ್ಲ ಕಮಿಟ್ಮೆಂಟ್ಸ್‌ ಇದೆ ಅನ್ನೋದಾದ್ರೆ ವರ್ಷಕ್ಕೊಮ್ಮೆಯಾದ್ರೂ ಒಂದು ಹೊಸ ಜಾಗಕ್ಕೆ ಹೋಗಿಬನ್ನಿ.

ಟ್ರಾವೆಲ್‌ ಯಾಕೆ ಮಾಡಬೇಕು?

ಟ್ರಾವೆಲ್‌ ಮಾಡೋದ್ರಿಂದ ಫಿಸಿಕಲ್‌ ಹಾಗೂ ಮೆಂಟಲಿ ಎಷ್ಟು ಫಿಟ್‌ ಇದ್ದೀರಿ ಅಂತ ಗೊತ್ತಾಗತ್ತೆ. ಟ್ರಾವೆಲ್‌ ಒತ್ತಡವನ್ನು ಕಡಿಮೆ ಮಾಡತ್ತೆ. ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ.

ರೋಬೋಟ್‌ ಥರ ಮಾಡಿದ್ದನ್ನೇ ಮಾಡಿ ಬೇಸರವಾದಾಗ ಒಂದು ಟ್ರಿಪ್‌ ಮಾಡಬೇಕು. ಇದು ಇನ್ನು ಆರು ತಿಂಗಳು ನಿಮ್ಮಲ್ಲಿ ಹೊಸ ಚೈತನ್ಯ ತುಂಬುತ್ತದೆ. ಮೆದುಳಿನಲ್ಲಿ ಕ್ರಿಯೇಟಿವಿಟಿ ಹೆಚ್ಚಿಸುತ್ತದೆ.

ಹೊಸತಾಗಿ ನೋಡದ ಒಂದು ಜಾಗವನ್ನು ನೋಡಿದ್ರೆ ಖುಷಿಯಾಗೋದಿಲ್ವಾ? ನಿಮ್ಮ ಹಾಗೂ ನಿಮ್ಮವರ ಖುಷಿಗಾಗಿ ಒಂದು ಟ್ರಿಪ್‌ ಹೋಗಿಬನ್ನಿ.

ಯಾವುದೇ ಪ್ರಾಜೆಕ್ಟ್‌ ಅಥವಾ ಹೊಸ ಕ್ರಿಯೇಟಿವ್‌ ಕೆಲಸ ಆರಂಭಿಸುವಾಗ ಟ್ರಾವೆಲ್‌ ಮಾಡಿದ್ರೆ ನಿಮ್ಮ ಐಡಿಯಾಗಳು ವಿಭಿನ್ನವಾಗಿರುತ್ತದೆ.

ಮಂಡಿ, ಮೂಳೆಗಳು, ಲಂಗ್ಸ್‌ ಎಲ್ಲವೂ ಆರೋಗ್ಯವಾಗಿ ಇರುವಾಗಲೇ ಟ್ರೆಕ್ಕಿಂಗ್‌, ಹೈಕಿಂಗ್‌ ಹಾಗೂ ವಾಕಿಂಗ್‌ ಮಾಡಿಬಿಡಿ ಆಮೇಲೆ ಆಗೋದಿಲ್ಲ ಅನ್ನೋದು ಗೊತ್ತಲ್ವಾ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !