ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ವಿಹಿಂಪದಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮೈಸೂರು:

ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮೈಸೂರು ಘಟಕವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಛೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ನಾನಾ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕೆಲದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಜಿಹಾದಿ ಮತಾಂಧತೆ ಹೆಚ್ಚುತ್ತಿದೆ. ಹಿಂದುಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಸರ್ಕಾರಿ ಆಸ್ತಿ ಮತ್ತು ದೇವಸ್ಥಾನಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಪೊಲೀಸ್ ಪಡೆಗಳ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಜಿಹಾದಿಗಳು ಕಾನೂನನ್ನು ಕೈಗೆತ್ತಿಕೊಂಡು ಅಶಾಂತಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಬಂಗಾಳ, ಕೇರಳದಂತಹ ರಾಜ್ಯಗಳ ಸರಕಾರಗಳು ಈ ಇಸ್ಲಾಮಿಕ್ ಜಿಹಾದಿಗಳೊಂದಿಗೆ ನಿಂತಿರುವುದು ಕಂಡುಬರುತ್ತದೆ. ಆದರೆ ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅನೇಕ ಧರ್ಮದ್ರೋಹಿಗಳಿಂದ ಅನಿಯಂತ್ರಿತ ವಿಕೃತವಾಗಿ ಪ್ರಚಾರವನ್ನು ಮಾಡಲಾಗುತ್ತಿದೆ. ಕೋಮು ದ್ವೇಷವನ್ನು ಹರಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕೊನೆಯ ಎರಡು ಶುಕ್ರವಾರದ ಪ್ರಾರ್ಥನೆಯ ನಂತರ, ಮಸೀದಿಗಳಿಂದ ಹೊರಬಂದ ಉದ್ರಿಕ್ತ ಗುಂಪುಗಳು ಮತ್ತು ಗಲಭೆಕೋರರನ್ನು ಗುರುತಿಸಬೇಕು ಮತ್ತು ಅವರ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಜೂನ್ 17 ರಂದು, ಈ ಮಸೀದಿಗಳು ಮತ್ತು ಇತರ ಮಸೀದಿಗಳ ಮೇಲೂ ನಿಗಾ ಇಡಬೇಕು. ಮುಲ್ಲಾಗಳು,ಮೌಲ್ವಿಗಳು ಅಥವಾ ಬೇರೆಯವರು ಜಿಹಾದಿ ಭಾಷಣ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು.
ಮಸೀದಿಗಳಿಂದ ಶುಕ್ರವಾರದ ನಮಾಜ್ ಮುಗಿಸಿ ಬರುವ ಯುವಕರನ್ನು ಪ್ರಚೋದಿಸುವ ಮುಲ್ಲಾಗಳು, ಧರ್ಮಗುರುಗಳು, ಇತರ ಮುಸ್ಲಿಂ ಮತ್ತು ಜಾತ್ಯತೀತ ನಾಯಕರನ್ನ ಗುರುತಿಸಿ, ಅವರ ಮೇಲೆ ಕೇಸುಗಳನ್ನ ದಾಖಲಿಸುವ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದೇಶಾದ್ಯಂತ ಇಂತಹ ವಿಷಕಾರಿ ಭಾಷಣ ಮಾಡುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಬೆದರಿಕೆಗೆ ಒಳಗಾದವರಿಗೆ ಭದ್ರತೆಯನ್ನು ಒದಗಿಸಬೇಕು ಮತ್ತು ಬೆದರಿಕೆ ಹಾಕಿದಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು.
ಎನ್.ಐ.ಎ. ತನಿಖಾ ಸಂಸ್ಥೆಯಿoದ ಗಲಭೆ ಅದ ರಾಜ್ಯಗಳಲ್ಲಿ ತನಿಖೆ ನಡೆಸಲು ಆದೇಶಿಸಬೇಕು. ಇಸ್ಲಾಮಿಕ್ ಜಿಹಾದಿ ಮತಾಂಧತೆಯನ್ನು ಹರಡುವ ಮೂಲಕ ದೇಶದಲ್ಲಿ ಹಿಂಸಾಚಾರವನ್ನು ಹರಡುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ತಬ್ಲಿಘಿ ಜಮಾತ್‌ನಂತಹ ಮೂಲಭೂತ ಸಂಘಟನೆಗಳ ಮೇಲೆ ತಕ್ಷಣ ಶಾಶ್ವತ ನಿಷೇಧವನ್ನು ಹೇರಬೇಕು ಎಂದು ಆಗ್ರಹಿಸಿದರು.
ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಸ್ಥಳಗಳಲ್ಲಿ, ಅವರ ಭದ್ರತೆಗೆ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ಕಡ್ಡಾಯವಾಗಿ ಪೊಲೀಸ್ ಠಾಣೆ ಸ್ಥಾಪಿಸಬೇಕು ಮತ್ತು ಅಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಸಾಕಷ್ಟು ಸೌಲಭ್ಯಗಳು ಮತ್ತು ಹಕ್ಕುಗಳನ್ನು ನೀಡಬೇಕು.
ಬೆದರಿಕೆಗೆ ಒಳಗಾದವರಿಗೆ ಭದ್ರತೆಯನ್ನು ಒದಗಿಸಬೇಕು. ಎನ್ ಐ ಎ ಸಂಸ್ಥೆಗಳಿoದ ಗಲಭೆ ಆದ ರಾಜ್ಯಗಳಲ್ಲಿ ತನಿಖೆ ನಡೆಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಹಿಂಪನ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಪ್ರದೀಶ್ ಕುಮಾರ್, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!