BIG BOSS | ದೊಡ್ಮನೆಯಿಂದ ಹೊರಬಂದ ಜಗದೀಶ್‌ SORRY ಕೇಳಿದ್ದು ಯಾರಿಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಅವಾಚ್ಯ ಶಬ್ದಗಳ ಬಳಕೆ ಮಾಡಿದ ಆರೋಪದಲ್ಲಿ ಜಗದೀಶ್ ಅವರು ಬಿಗ್ ಬಾಸ್​ನಿಂದ ಹೊರಹೋಗಿದ್ದಾರೆ.

ಹೊರಬಂದ ನಂತರ ಇವರೆಲ್ಲರಿಗೂ ಕ್ಷಮೆ ಕೇಳಿದ್ದಾರೆ..

ನೂರಾರು ಕ್ಯಾಮೆರಾ, ಸಾವಿರಾರು ಬಿಗ್​ಬಾಸ್​ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್​ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ ಎಂದಿದ್ದಾರೆ.

ಮುಂದುವರೆದು, ನಿಮ್ಮ ಪ್ರತಿ ಒಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್​ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು ಎಂದು ಬಿಗ್​ಬಾಸ್​ ಕಾರ್ಯಕ್ರಮವನ್ನು ಹೊಗಳಿದ್ದಾರೆ.

ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲ ತುಂಬಾ ಚಿಕ್ಕ ವಯಸ್ಸಿನಲ್ಲೇ ಅಧ್ಭುತ ಕಲಾವಿದರು, ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ, ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿದೆ, ಅದು ನಟನೆ ಅಥವಾ ಮನರಂಜನೆಯ ಒಂದು ಭಾಗವಷ್ಟೆ, ವೈಯಕ್ತಿಕ ದ್ವೇಷ ಯಾವುದೂ ಇಲ್ಲ ಎಂದಿದ್ದಾರೆ ಜಗದೀಶ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!