ಕಹಿ ಘಟನೆಗೆ ವರ್ಷ ತುಂಬಿದರೂ ನೆನಪುಗಳಿನ್ನೂ ಹಸಿರು…

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ಪ್ರಶಸ್ತಿ ವಿಜೇತ ಅಪರೂಪದ ಕಲಾವಿದ ಸಂಚಾರಿ ವಿಜಯ್ ಅಗಲಿ ಇಂದಿಗೆ (ಜೂ.೧೫) ಒಂದು ವರ್ಷ ತುಂಬಿದೆ.
ರಂಗಭೂಮಿ ಹಿನ್ನೆಲೆಯಿಂದ ಬಂದ ವಿಜಯ್‌ಗೆ ಖ್ಯಾತಿ ತಂದುಕೊಟ್ಟ ಚಿತ್ರ ’ನಾನು ಅವನಲ್ಲ ಅವಳು’. ಅವರಿಗೆ  ದೊಡ್ಡ ಅಭಿಮಾನಿ ಬಳಗವೇ ಇತ್ತು. ಮೂಲತಃ ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದ ವಿಜಯ್ ಕುಮಾರ್, ಸಂಚಾರಿ ನಾಟಕ ತಂಡದಲ್ಲಿ ತೊಡಗಿಸಿಕೊಂಡಿದ್ದರಿಂದ ಹೆಸರಿನ ಮುಂದೆ ‘ಸಂಚಾರಿ’ಯಾಗಿದ್ದರು.  ಅವರ ಅಭಿನಯದ ನಾಟಕಗಳೂ ಸಾಕಷ್ಟು ಜನಪ್ರೀಯವಾಗಿದ್ದವು.

ಕೇವಲ ಕಲೆಯಷ್ಟೇ ಅಲ್ಲ, ಸಾಮಾಜಿಕ ಸೇವೆಗಳಲ್ಲಿಯೂ ವಿಜಯ್ ತಮ್ಮನ್ನು ತಾವು ಸಕ್ರೀಯವಾಗಿ  ತೊಡಗಿಸಿಕೊಂಡವರು. ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಲಾಕ್‌ಡೌನ್ ಸಂದರ್ಭದಲ್ಲೂ ಅವರು ಅನೇಕರಿಗೆ ಸಹಾಯ ಮಾಡಿದ್ದರು.
ಕೇವಲ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಸಂಚಾರಿ ವಿಜಯ್ ತಮ್ಮ ಛಾಪು ಮೂಡಿಸಿದ್ದರು. ಆಕ್ಟ್ 1978, ನಾನು ಅವನಲ್ಲ ಅವಳು, ಒಗ್ಗರಣೆ, ಕೃಷ್ಣ ತುಳಸಿ, ಆಟಕ್ಕುಂಟು ಲೆಕ್ಕಕ್ಕಿಕ್ಕ, ವಿಲನ್, ಕಿಲ್ಲಿಂಗ್ ವೀರಪ್ಪನ್, ಅಲ್ಲಮ ಮುಂತಾದ ಅನೇಕ ಸಿನಿಮಾಗಳಲ್ಲಿ ವಿಜಯ್ ಅಭಿನಯಿಸಿದ್ದಾರೆ. ಇಂತಹ ಅಭೂತಪೂರ್ವ ನಟನಿಗೆ ಈ ಮೂಲಕ ಒಂದು ಅಕ್ಷರ ಗೌರವ ಸಲ್ಲಿಸೋಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!