ಹುಲಿಗಳ ನಡುವೆ ನಿರ್ಭಯವಾಗಿ ಓಡಾಡುವ ನಾಯಿಯನ್ನು ನೋಡಿದ್ದೀರಾ? ಈ ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹುಲಿ ಎಂದರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ, ಝೂಗಳಲ್ಲಿ ದೂರದಿಂದ ನೋಡುವುದು ಬಿಟ್ಟರೆ, ಅದರ ಹತ್ತಿರ ಹೋಗುವ ಸಾಹಸ ಯಾರೂ ಮಾಡುವುದಿಲ್ಲ. ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ಸಹ ಹುಲಿಯಿಂದ ದೂರನೇ ಉಳಿಯುತ್ತವೆ. ಆದರೆ ವೈರಲ್ ಆಗಿರುವ  ವಿಡಿಯೋದಲ್ಲಿ ಗೋಲ್ಡನ್ ರಿಟ್ರೈವರ್ ಹುಲಿಗಳ ನಡುವೆ ಪುಟ್ಟ ನಾಯಿಯೊಂದು ನಿರ್ಭೀತಿಯಿಂದ ತಿರುಗಾಡುತ್ತಿದೆ.

‘ಟೈಗರ್ ಬಿಗ್‌ಫಾನ್’ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆರೇಳು ಬೃಹತ್ ಹುಲಿಗಳ ಮಧ್ಯೆ ನಾಯಿಯೊಂದು ಯಾವುದೇ ಭಯವಿಲ್ಲದೆ ನಡೆದಾಡುತ್ತಿದೆ. ಆಶ್ಚರ್ಯವೆಂದರೆ, ಹುಲಿಗಳು ಕೂಡ ಪುಟ್ಟ ನಾಯಿಗೆ ಯಾವುದೇ ಹಾನಿಯುಂಟುಮಾಡಿಲ್ಲ.  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ನಾಯಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!