ಇಂದು ಭಾರತ- ಪಾಕಿಸ್ತಾನ ಮಧ್ಯೆ ಸೂಪರ್ ಸಂಡೇ ಮ್ಯಾಚ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಇಂದು ಸೆಣಸಾಡಲಿದ್ದು, ನಾಕೌಟ್​ ಪಂದ್ಯದಲ್ಲಿ ಭಾರತ ವಿರುದ್ಧ ಸೋತಿದ್ದ ಪಾಕಿಸ್ತಾನ ಸೂಪರ್​ 4 ಹಂತದಲ್ಲಿ ಗೆಲ್ಲುವ ಪ್ಲಾನ್​ ಮಾಡಿದೆ.
ಉಭಯ ತಂಡಗಳು ಸೂಪರ್ 4 ಹಂತದಲ್ಲಿ ಗೆಲುವಿನ ಆರಂಭ ಪಡೆಯುವ ಹುಮ್ಮಸ್ಸಿನಲ್ಲಿದ್ದು, ಭಾರತ ವಿರುದ್ಧ ಸೋತಿದ್ದ ಪಾಕಿಸ್ತಾನ ಹಾಂಗ್​ಕಾಂಗ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಸೂಪರ್​ 4 ಹಂತಕ್ಕೆ ಬಂದಿದೆ. ಭಾರತ ವಿರುದ್ಧ 150 ರನ್​ ಮಾಡಿದ್ದ ಹಾಂಗ್​ಕಾಂಗ್​ ಪಾಕ್​ ಬೌಲರ್​​ಗಳ ಕರಾರುವಾಕ್​ ದಾಳಿಗೆ ಕೇವಲ 38 ರನ್​​ಗಳಿಗೆ ಪತನ ಕಂಡಿತ್ತು. ಇದು ಪಾಕ್​ ಆಟಗಾರರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ಮತ್ತು ಹಾಂಗ್​ಕಾಂಗ್​ ವಿರುದ್ಧ ಭರ್ಜರಿ ಗೆಲುವನ್ನು ಮುಂದುವರಿಸಲು ಪಾಕ್​ ಯೋಜನೆ ರೂಪಿಸಿದ್ದು, ನಾಕೌಟ್​ ಹಂತದಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಭಾರತ ಈ ಪಂದ್ಯದಲ್ಲೂ ಪಾಕಿಸ್ತಾನವನ್ನು ಕೆಡವಲು ಸಜ್ಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!