ನಿಲ್ಲದ ಕೋವಿಡ್ ಕಾಟ: 24 ತಾಸು, 7,231 ಕೇಸ್, ಅರ್ಧ ಶತಕದತ್ತ ಸಾವಿನ ಸಂಖ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ 24 ತಾಸುಗಳ ಅವಧಿಯಲ್ಲಿ‌ ದೇಶದಲ್ಲಿ ಹೊಸದಾಗಿ 7,231 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯವಸಚಿವಾಲಯ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಈಗ ಸೋಂಕಿತರ ಸಂಖ್ಯೆ 4,44,28,393ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಇದೇ ಸಂದರ್ಭ ಸಕ್ರಿಯ ಪ್ರಕರಣಗಳ ಸಂಖ್ಯೆ 64,667ಕ್ಕೆ ಇಳಿಕೆಯಾಗಿದೆ.‌ಸೋಂಕಿಗೆ ತುತ್ತಾದವರ ಪೈಕಿ ಕೇರಳದಲ್ಲಿ 10 ಮಂದಿ ಸೇರಿದಂತೆ 45 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲೀಗ ಶೇ 0.15ರಷ್ಟು ಸಕ್ರಿಯ ಪ್ರಕರಣಗಳಿದ್ದು, ರಾಷ್ಟ್ರೀಯ ಚೇತರಿಕೆ ದರ ಶೇ 98.67ರಷ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!