ಮೇಷ
ಉದಾಸೀನತೆ ಕಾಡಲಿದೆ. ಕೆಲಸ ನಿಧಾನ. ತುರ್ತು ಕಾರ್ಯ ಕಡೆಗಣಿಸಬೇಡಿ. ಹೊಸ ವ್ಯವಹಾರದಲ್ಲಿ ಹಣ ಹೂಡಬೇಡಿ.
ವೃಷಭ
ವೃತ್ತಿ ಕಡೆಗೇ ಗಮನ ಕೊಟ್ಟು ಇತರ ವಿಷಯ ಕಡೆಗಣಿಸಿದ್ದೀರಿ. ಖಾಸಗಿ ವಿಷಯಕ್ಕೂ ಆದ್ಯತೆ ಕೊಡಿ. ಆಪ್ತರ ಹಿತ ಗಮನಿಸಿ. ಹೂಡಿಕೆಯಿಂದ ಲಾಭ.
ಮಿಥುನ
ಈ ದಿನ ಹೆಚ್ಚು ಎಚ್ಚರ ಅವಶ್ಯ. ಸಣ್ಣ ತಪ್ಪು ದೊಡ್ಡ ಪರಿಣಾಮ ಉಂಟು ಮಾಡೀತು. ಖರೀದಿ ಹುಮ್ಮಸ್ಸಿನಲ್ಲಿ ಖರ್ಚು ಅಧಿಕ. ಬಂಧು ಭೇಟಿ. ಕಟಕ
ಉದ್ವಿಗ್ನ ಪರಿಸ್ಥಿತಿ ಎದುರಿಸುವಿರಿ. ಮನಸು ಶಾಂತಗೊಳಿಸಲು ಹೆಚ್ಚು ಗಮನ ಕೊಡಿ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಸಾಧಿಸಿ.
ಸಿಂಹ
ಉದ್ಯೋಗಕ್ಕೆ ಸಂಬಂಽಸಿ ಶುಭ ಸುದ್ದಿ. ಆಪ್ತರ ಜತೆಗಿನ ಭಿನ್ನಮತ ಶಮನ. ಹಣದ ವ್ಯವಹಾರದಲ್ಲಿ ಅನಿರೀಕ್ಷಿತ ತೊಡಕು ಉಂಟಾಗಲಿದೆ. ಕನ್ಯಾ
ನೀವು ನಿರರ್ಥಕ ಅಂದುಕೊಂಡ ಕೆಲಸ ಉತ್ತಮ ಫಲಿತಾಂಶ ನೀಡಲಿದೆ. ತೃಪ್ತಿಕರ ಆರ್ಥಿಕ ಬೆಳವಣಿಗೆ. ಕೌಟುಂಬಿಕ ಸಾಮರಸ್ಯ. ತುಲಾ
ಎಲ್ಲವೂ ನಿಮಗೆ ಪೂರಕವಾಗಿದ್ದರೂ ಏನೋ ಕೊರಗು, ಬೇಸರ. ಕೆಲ ವಿಚಾರಗಳಲ್ಲಿ ನಿಮ್ಮ ಧೋರಣೆ ಬದಲಿಸುವ ಪ್ರಸಂಗ ಬಂದೀತು. ವೃಶ್ಚಿಕ
ವಿವಾಹ ಸಂಬಂಧ ಕೂಡಿಬಂದೀತು. ಉದ್ವಿಗ್ನತೆ ಸೃಷ್ಟಿಸುವ ವಿಷಯಗಳಿಂದ ದೂರವಿರಿ. ವೃತ್ತಿ ಕಾರ್ಯದಲ್ಲಿ ಸಫಲತೆ. ಬಂಧುಗಳ ಸಹಕಾರ.
ಧನು
ಭವಿಷ್ಯದ ಯೋಜನೆ ರೂಪಿಸಲು ಸಕಾಲ. ಉದ್ಯೋಗ ಪಡೆಯುವಲ್ಲಿ ಸ-ಲ. ಧೂಳು ಸಂಬಂಽ ಅಲರ್ಜಿ ಉಂಟಾದೀತು. ಕೌಟುಂಬಿಕ ಸೌಹಾರ್ದ.
ಮಕರ
ನಿಮ್ಮ ಕಲ್ಪನೆ, ಆಕಾಂಕ್ಷೆ ಸಾಕಾರಗೊಳಿಸಲು ಸಫಲ. ಆತ್ಮೀಯರ ಸಾಧನೆಯ ತೃಪ್ತಿ. ವಾಹನ ಚಾಲನೆಯಲ್ಲಿ ತುಸು ಎಚ್ಚರವಿರಲಿ.
ಕುಂಭ
ಕಡೆಗಣಿಸಿದ್ದ ವಿಷಯವೊಂದು ಮುನ್ನೆಲೆಗೆ ಬರಲಿದೆ. ಆ ಬಗ್ಗೆ ಗಮನ ಹರಿಸಿ. ವೃತ್ತಿಗೆ ಸಂಬಂಧಿಸಿ ಶುಭ ಸುದ್ದಿ ಕೇಳಲಿದೆ. ಧನಪ್ರಾಪ್ತಿ. ಮೀನ
ಏಕತಾನತೆಯಿಂದ ಹೊರಬಂದು ಹೊಸತನಕ್ಕೆ ಕ್ರಿಯಾಶೀಲರಾಗಿ.ಅನವಶ್ಯ ಜಗಳಕ್ಕೆ ಹೋಗದಿರಿ. ತಾಳ್ಮೆ ಪ್ರದರ್ಶಿಸಿ. ಪ್ರೀತಿಯಲ್ಲಿ ಮಹತ್ವದ ಬೆಳವಣಿಗೆ.



