ಮೇಷ.
ಉತ್ಸಾಹ ನಾಶ. ಪ್ರತಿ ಹೆಜ್ಜೆ ಎಚ್ಚರದಿಂದ ಇಡಿ. ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಮನೆಯ ಬಿಗು ಪರಿಸ್ಥಿತಿ ತಿಳಿಗೊಳಿಸಿ. ವೆಚ್ಚ ಅಽಕದ ಚಿಂತೆ.
ವೃಷಭ
ಹಣದ ವಿಚಾರ ಸದ್ಯಕ್ಕೆ ಬಿಡಿ, ದೈನಂದಿನ ಬದುಕಲ್ಲಿ ಉತ್ಸಾಹ ತುಂಬುವ ವಿಷಯಕ್ಕೆ ಪ್ರಾಮುಖ್ಯತೆ ಕೊಡಿ. ಸಂಘರ್ಷ ತಪ್ಪಿಸಿರಿ.
ಮಿಥುನ
ವಿಶೇಷ ಘಟಿಸದ ಸಾಮಾನ್ಯ ದಿನ. ವೃತ್ತಿ ಸಂಬಂಧ ಪ್ರಯಾಣ ಸಾಧ್ಯತೆ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣದೆ ಚಿಂತೆ ಉಳಿದೀತು.
ಕಟಕ
ಒತ್ತಡದ ಬದುಕಿಂದ ತುಸು ಹೊರಬಂದು ಜೀವನ ಆನಂದಿಸಲು ಗಮನ ಕೊಡಿ. ಆತ್ಮೀಯರ ಸಂಗದಲ್ಲಿ ಕಾಲ ಕಳೆಯಿರಿ. ಖರ್ಚು ಕಡಿಮೆ ಮಾಡಿ.
ಸಿಂಹ
ನಿಮ್ಮ ಕೆಲಸದಲ್ಲಿ ಬದಲಾವಣೆ ಬಂದೀತು ನಿರೀಕ್ಷೆಗಿಂತ ಅಽಕ ಕಾರ್ಯ. ಒತ್ತಡ ಅಽಕ. ಆದರೂ ದಿನದಂತ್ಯಕ್ಕೆ ಸಮಾಧಾನ ಪಡುವಿರಿ.
ಕನ್ಯಾ
ಬಳಲಿಕೆ, ಒತ್ತಡ ಇಂದು ಕಾಡಬಹುದು. ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ಅನುಚಿತ ಬೆಳವಣಿಗೆ ಕಾಣುವಿರಿ. ತಾಳ್ಮೆಯ ನಡೆಯಿರಲಿ.
ತುಲಾ
ಗಾಬರಿ ಪಡಿಸುವ ಪ್ರಸಂಗ ಉಂಟಾದೀತು. ವಸ್ತು ಕಳವಿನ ಸಾಧ್ಯತೆ ಇದೆ. ಅಜೀರ್ಣ ಸಂಬಂಽ ಹೊಟ್ಟೆ ಸಮಸ್ಯೆ. ಸಮಚಿತ್ತ ದಿಂದ ವ್ಯವಹರಿಸಿ.
ವೃಶ್ಚಿಕ
ನಿಮ್ಮ ಅಂಜಿಕೆ, ಚಿಂತೆಗಳ ಬಗ್ಗೆ ಮುಕ್ತ ವಿಮರ್ಶೆ ನಡೆಸಿ. ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿರಿ. ಪಲಾಯನ ಮಾಡದಿರಿ.
ಧನು
ಕಾರ್ಯ ಅಪೂರ್ಣ. ಪ್ರಮುಖ ಕಾರ್ಯ ಕೈಗೆತ್ತಿಕೊಳ್ಳದಿರಿ. ಆಪ್ತ ಸಂಬಂಧದಲ್ಲಿ ಒಡಕು. ಸಮಾಧಾನದ ನಡೆ ಅತ್ಯವಶ್ಯ.
ಮಕರ
ವಿವಾದ ಸೃಷ್ಟಿಸುವ ವಿಷಯದಿಂದ ದೂರವಿರಿ. ಪ್ರಮುಖ ಸಭೆ ಮುಂದೂಡಿ. ವೃತ್ತಿ ಸಂಬಂಽತ ವ್ಯವಹಾರ ಕಷ್ಟಕ್ಕೆ ಸಿಲುಕಬಹುದು.
ಕುಂಭ
ಫಲಪ್ರದ ದಿನವಲ್ಲ. ಎಲ್ಲರ ಜತೆ ಬೆರೆಯದೆ ಏಕಾಂಗಿಯಾಗಿರಲು ಬಯಸುವಿರಿ. ಆತ್ಮೀಯರ ಸಂಗಡ ಕಾಲ ಕಳೆಯಿರಿ. ಹುರುಪು ತುಂಬಿಕೊಳ್ಳಿ.
ಮೀನ
ನಿಮ್ಮ ಸಮಸ್ಯೆ ಮುಗಿಯುತ್ತಿಲ್ಲ ಎಂಬ ಚಿಂತೆ ಕಾಡುವುದು. ಸ್ವಲ್ಪ ದಿನ ಕಾಯಿರಿ, ಬಳಿಕ ಎಲ್ಲ ಸರಿಯಾಗಲಿದೆ. ಹಿತಕರ ಬೆಳವಣಿಗೆ ಸಂಭವಿಸಲಿದೆ.



