ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಇಂದು ತಮ್ಮ 29ನೇ ಬರ್ಥ್‌ಡೇ ಆಚರಣೆ ಮಾಡಿಕೊಳ್ತಿದ್ದಾರೆ. ಸದ್ಯ ಬರ್ಥ್‌ಡೇಗಾಗಿ ರಶ್ಮಿಕಾ ಟ್ರಾವೆಲ್ ಮಾಡ್ತಿದ್ದು, ಸೀ ಸೈಡ್‌ನ ಫೋಟೊ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ.
ನಟಿ ರಶ್ಮಿಕಾ ಇದೀಗ ಪ್ಯಾನ್ ಇಂಡಿಯಾ ನಟಿ, ಆದರೆ ಇವರು ಕರಿಯರ್ ಆರಂಭಿಸಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ. ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಸಾನ್ವಿ ಎಂದೇ ಕರೆಸಿಕೊಳ್ಳುತಿದ್ದರು. ಎಷ್ಟೋ ಪೋಷಕರು ತಮ್ಮ ಮಗಳಿಗೆ ಸಾನ್ವಿ ಎಂದೇ ಹೆಸರಿಟ್ಟಿದ್ದಾರೆ.
ಇದಾದ ನಂತರ ಕನ್ನಡದಲ್ಲಿ ಸಾಲು ಸಾಲು ಸಿನಿಮಾ ಮಾಡಿದ ನಟಿಗೆ ತೆಲುಗು ಸಿನಿಮಾ ಆಫರ್ ಒಂದು ಬಂತು. ಅದೇ ಗೀತಾ ಗೋವಿಂದಂ. ಅಲ್ಲಿಂದ ನಟಿ ಜನಪ್ರಿಯತೆ ಹೆಚ್ಚಾಯ್ತು ಅದಾದ ನಂತರ ಪುಷ್ಪಾ ಹಾಗೂ ಪುಷ್ಪಾ-2 ಸಿಕ್ಕಾಪಟ್ಟೆ ಹಿಟ್ ಆಗಿ ಕೋಟಿ ಕೋಟಿ ರೂ. ಲಾಭ ಆಯ್ತು. ಸಾಲು ಸಾಲು ಸಿನಿಮಾಗಳ ನಂತರ ರಶ್ಮಿಕಾಗೆ ಬಾಲಿವುಡ್ ಅವಕಾಶ ಸಿಕ್ಕಿತು. ಅದು ಕೂಡ ಬಿಗ್ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ. ಗುಡ್‌ಬೈ ನಂತರ ರಶ್ಮಿಕಾ ಬಾಲಿವುಡ್‌ನಲ್ಲಿ ನೆಲೆ ಊರಿದ್ದಾರೆ. ಸದ್ಯ ಪುಷ್ಪಾ-2, ಛಾವಾ, ಅನಿಮಲ್ ಹಾಗೂ ಸಿಖಂದರ್‌ನಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ.
ರಶ್ಮಿಕಾ ಸ್ಯಾಂಡಲ್‌ವುಡ್ ಇಂಡಸ್ಟ್ರಿಯಿಂದ ಬೇರೆಡೆಗೆ ಹಾರಿದ ನಂತರ ಟ್ರೋಲಿಗರು ಆಕೆ ಬೆನ್ನು ಹತ್ತಿದರು. ಆದರೆ ಎಷ್ಟುಅದನ್ನೆಲ್ಲಾ ಕ್ಯಾರೆ ಅನ್ನದೆ ರಶ್ಮಿಕಾ ಮುನ್ನಡೆದು, ಜನ ತಲೆ ಎತ್ತಿ ನೋಡುವ ಹಂತಕ್ಕೆ ಬಂದಿದ್ದಾರೆ. Happy birthday Rashmika mandanna 🍰