ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದೆ. ರಾಜ್ಯದಲ್ಲಿ ಸಂಜೆ 6:30ರ ನಂತರ ಬರೀ 10 ನಿಮಿಷಗಳ ಕಾಲ ಭಾಗಶಃ ಗ್ರಹಣ ಗೋಚರವಾಗಲಿದೆ.
ಇಂದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಭಾರತದ ಹೆಚ್ಚಿನ ಭಾಗಗಳಲ್ಲಿ ಗ್ರಹಣದ ಕಡೆಯ ಹಂತ ಮಾತ್ರ ಗೋಚರವಾಗಲಿದೆ.
ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಲಿದೆ. ಸಂಜೆ 4:30ರ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಆವರಿಸಲಿದೆ. ಸಂಜೆ 6:47ಕ್ಕೆ ಗ್ರಹಣ ಮುಕ್ತಾಯವಾಗಲಿದೆ. ಭಾರತದಲ್ಲಿ ಹತ್ತು ನಿಮಿಷದ ಗ್ರಹಣ ಇರಲಿದೆ.
ಈ ಬಾರಿಯ ಚಂದ್ರಗ್ರಹಣದಲ್ಲಿ ದೇಗುಲಗಳ ದರುಶನದ ಸಮಯ ಬದಲಾವಣೆ ಆಗಲಿದೆ. ಮಧ್ಯಾಹ್ನ ದೇಗುಲ ಮುಚ್ಚಿರಲಿದ್ದು, ಸಂಜೆ ಪೂಜೆಯ ನಂತರ ದೇವರ ದರುಶನ ಇರಲಿದೆ. ಇನ್ನು ಮುಂದಿನ ಗ್ರಹಣಕ್ಕೆ 2028ರವರೆಗೆ ಕಾಯಬೇಕಿದೆ.



