ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಸೂರ್ಯ ಹಾಗೂ ಚಂದ್ರನ ನಡುವಣ ಭೂಮಿ ಬಂದಾಗ ಚಂದ್ರಗ್ರಹಣವೆಂದು ಪರಿಗಣಿಸಲಾಗುತ್ತದೆ.
ಇಂದು ಚಂದ್ರ ಕೆಂಪಾಗಿ ಕಾಣಲಿದ್ದಾರೆ. ರಾತ್ರಿ 11.31ಕ್ಕೆ ಗ್ರಹಣ ಆರಂಭವಾಗಲಿದ್ದು, ಬೆಳಗಿನ ಜಾವ 3:36ಕ್ಕೆ ಕೊನೆಯಾಗಲಿದೆ.
30 ವರ್ಷಗಳ ನಂತರ ಶರದ್ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ, ಅ.೨೮-೨೯ರ ಮಧ್ಯರಾತ್ರಿಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸಲಿದೆ. ೩೦ ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ ಇದಾಗಿರಲಿದೆ.
ಇಂದು ಮಧ್ಯರಾತ್ರಿ ಭಾರತದ ಎಲ್ಲಾ ಸ್ಥಳಗಳಲ್ಲಿಯೂ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ಬೆಳಗಿನ ಜಾವ 3:36ಕ್ಕೆ ಗ್ರಹಣ ಕೊನೆಗೊಳ್ಳಲಿದೆ. ಭಾರತದಲ್ಲಿ ಸ್ಪಷ್ಟವಾಗಿ ಗ್ರಹಣ ಗೋಚರವಾಗಲಿದೆ.
ಗ್ರಹಣ ಸಮಯದಲ್ಲಿ ಏನು ಮಾಡಬೇಕು?
ಇಂದು ಮಧ್ಯಾಹ್ನ 2:55 ರಿಂದ ಗ್ರಹಣದ ಸೂತಕ ಆವರಿಸಲಿದೆ. ಈ ಸಮಯ ಮೀರುವ ಮುನ್ನ ಊಟ ಮಾಡಿಬಿಡಿ. ಇದಾದ ನಂತರ ಆಹಾರ ಸೇವಿಸದೇ ಇದ್ದರೆ ಒಳಿತು, ಬೆಳಗಿನ ಜಾವ 5 ಗಂಟೆಗೆ ಸ್ನಾನ ಮಾಡಿ ಚಂದ್ರ ಹಾಗೂ ರಾಹು ಪೂಜೆ ಮಾಡಬೇಕು.
ಏನು ಮಾಡಬಾರದು?
ಸೂತಕ ಕಾಲ ಆರಂಭವಾದ ನಂತರ ಯಾವುದೇ ಆಹಾರ ಸೇವಿಸಬಾರದು. ಗ್ರಹಣ ಸಂದರ್ಭದಲ್ಲಿ ಮನೆಯಲ್ಲೇ ಇದ್ದರೆ ಒಳಿತು. ಗರ್ಭಿಣಿಯರು ಹೊರಬರಬಾರದು, ಮಕ್ಕಳು, ಅನಾರೋಗ್ಯ ಇರುವವರು ಆಹಾರ ಸೇವಿಸಬಹುದು. ಸೂತಕ ಸಮಯ ಆರಂಭಕ್ಕೂ ಮುನ್ನ ಅಡುಗೆ ಮಾಡಿ ಇಟ್ಟುಬಿಡಿ.
ಈ ಬಾರಿ ಭಾರತ, ಬೆಲ್ಜಿಯಂ, ಗ್ರೀಸ್, ಫಿನ್‌ಲ್ಯಾಂಡ್, ಪೋರ್ಚುಗಲ್, ಥೈಲೆಂಡ್, ಹಂಗೇರಿ, ಈಜಿಪ್ಟ್, ಟರ್ಕಿ ಸೇರಿ ಹಲವು ದೇಶಗಳಲ್ಲಿಯೂ ಚಂದ್ರ ಗ್ರಹಣ ಗೋಚರವಾಗಲಿದೆ.