ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2023 ಟೂರ್ನಿ ರೋಚಕ ಘಟ್ಟ ತಲುಪಿದ್ದು, ಇಂದು ಶ್ರೀಲಂಕಾ-ಆಫ್ಘನ್ ಮುಖಾಮುಖಿಯಾಗಲಿದೆ.
ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ಸೂಪರ್ 4 ಹಂತಕ್ಕೆ ತಲುಪಿದೆ, ಇನ್ನು ಗ್ರೂಪ್ ಬಿಯಿಂದ ಯಾವ ತಂಡ ಸೂಪರ್-4 ಹಂತ ತಲುಪಲಿದೆ ಎಂದು ತಿಳಿಯಲು ಇಂದಿನ ಪಂದ್ಯ ಬಹುಮುಖ್ಯವಾಗಿದೆ.
ಲಾಹೋರ್‌ನ ಗಢಾಫಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ಲಂಕಾ ವಿರುದ್ಧ ಆಫ್ಘನ್ ಇಂದಿನ ಪಂದ್ಯವನ್ನು ಗೆದ್ದರಷ್ಟೇ ಮುಂದಿನ ಹಂತಕ್ಕೆ ತೇರ್ಗಡೆಯಾಗಲಿದೆ.
ಮಧ್ಯಾಹ್ನ ಮೂರು ಗಂಟೆಗೆ ಪಂದ್ಯ ಆರಂಭವಾಗಲಿದೆ. ಪಂದ್ಯಕ್ಕೂ ಅರ್ಧ ಗಂಟೆ ಮುಂಚೆಯೇ ಟಾಸ್ ಆಯ್ಕೆ ನಡೆಯಲಿದೆ.